Publish Date: Thu, 24 Jan 2019 (19:22 IST)
Updated Date: Thu, 24 Jan 2019 (19:24 IST)
ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಣದ ಕಡೆ ಗಮನಹರಿಸಬೇಕು ಎಂದು ಶಿಕ್ಷಕರಿಗೆ ಸಂಸದರು ಹೇಳಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಆವರಣದಲ್ಲಿ ನೂತನವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವರ್ಡ್ ವಿಷನ್ ಸಂಸ್ಥೆಯ ಸಹಯೋಹದೊಂದಿಗೆ ನಿರ್ಮಿಸಿರುವ ಜ್ಞಾನಭವನ ತರಬೇತಿ ಕೇಂದ್ರವನ್ನು ಚಾಮರಾಜನಗರದ ಲೋಕಸಭಾ ಕ್ಷೇತ್ರದ ಸಂಸದ ಆರ್.ದೃವನಾರಾಯಣ್ ಹಾಗೂ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಜೊತೆಗೂಡಿ ನೂತನ ಕಟ್ಟಡ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆರ್. ದೃವನಾರಾಯಣ್ ಮಾತನಾಡಿ, ಸರ್ಕಾರವು ಎಲ್ಲಾ ಸಮಯದಲ್ಲೂ ಎಲ್ಲಾ ರೀತಿಯ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಡಲು ಸಾದ್ಯವಿರುವುದಿಲ್ಲ. ಅಂತಹ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು ಹಾಗೂ ಎನ್.ಜಿ.ಒ ಗಳು, ಮಠಮಾನ್ಯಗಳ ಜೊತೆ ಕೈಜೋಡಿಸಿಕೊಂಡು ಸಹಕಾರ ಪಡೆದು ನಮ್ಮ ಅಭಿವೃದ್ಧಿ ಕೆಲಸಗಳನ್ನು ಮಾಡಿ ಪ್ರಗತಿ ಸಾಧಿಸಲು ಸಹಕರಿಸಬೇಕಾಗುತ್ತದೆ ಎಂದರು.