Daily Horoscope

Select Your Language

Notifications

webdunia
webdunia
webdunia
webdunia

ಗಂಗಮ್ಮ ವಿಷ ಪ್ರಸಾದ ಪ್ರಕರಣ ಜನರಲ್ಲಿ ಹೆಚ್ಚಿದ ಆತಂಕ

ವಿಷ ಪ್ರಸಾದ
ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟು, ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪ್ರಸಾದ ಸೇವನೆಯಿಂದ ಕವಿತ (28), ಸರಸ್ವತಮ್ಮ (56) ಎಂಬ ಮಹಿಳೆ ಮೃತ ಪಟ್ಟಿದ್ದು, ಮೃತ ಕವಿತಾಳ ಮಕ್ಕಳಾದ ಗಾನವಿ ಹಾಗೂ ದೀಕ್ಷ ತೀವ್ರ ಅಸ್ಥವ್ಯಸ್ಥಗೊಂಡಿದ್ದು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 8 ಕ್ಕೂ ಹೆಚ್ಚು ಮಂದಿ ಚಿಂತಾಮಣಿ, ಚೇಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಹಾಗೂ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ಚಿಂತಾಮಣಿಗೆ ಭೇಟಿ ನೀಡಿ ಪ್ರಸಾದ ದುರಂತಕ್ಕೆ ಕಾರಣರಾದವರನ್ನು ಪತ್ತೆಹಚ್ಚುವ ಕಾರ್ಯಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಸಂಸದ ಕೆ.ಹೆಚ್.ಮುನಿಯಪ್ಪ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ನಲ್ಲಿ ಕೊಡುಗೆ ಕೊಡಲು ರೆಡಿಯಾದ ಮೋದಿ!