Select Your Language

Notifications

webdunia
webdunia
webdunia
webdunia

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ನಿದ್ದೆ, ಮೊಬೈಲ್ ನಲ್ಲಿ ಬ್ಯುಸಿ!

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ನಿದ್ದೆ, ಮೊಬೈಲ್ ನಲ್ಲಿ ಬ್ಯುಸಿ!
ದಾವಣಗೆರೆ , ಶುಕ್ರವಾರ, 25 ಜನವರಿ 2019 (15:12 IST)
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆದ ಸಭೆಯಲ್ಲಿ ಕೆಲವು ಅಧಿಕಾರಿಗಳು ನಿದ್ರೆಗೆ ಜಾರಿದ್ದರೆ, ಇನ್ನೂ ಕೆಲವು ಅಧಿಕಾರಿಗಳು ಸಭೆಯಲ್ಲಿಯೇ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು.

ದಾವಣಗೆರೆ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಧಿಕಾರಿಗಳು ನಿದ್ದೆಗೆ ಜಾರಿದ್ದರೆ, ಇನ್ನೂ ಕೆಲ ಅಧಿಕಾರಿಗಳು ಮೊಬೈಲ್ ನಲ್ಲಿ‌ ಬ್ಯುಜಿಯಾಗಿದ್ದರು.

ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀನಿವಾಸ್ ಅವರು ಬೇರೆ ಜಿಲ್ಲೆಯವರು, ಅಪರೂಪಕ್ಕೆ ಯಾವುದಾದರು ಸಮಾರಂಭಗಳು, ಸರ್ಕಾರಿ ಕಾರ್ಯಕ್ರಮಗಳು ಇದ್ದಾಗ ಮಾತ್ರ ದಾವಣಗೆರೆಯಲ್ಲಿ ಅಧಿಕಾರಿಗಳ ಸಭೆ ಮಾಡುತ್ತಾರೆ ಎಂಬ ಆರೋಪ ಇತ್ತು. ಅದರಂತೆ ನಾಳೆ ಗಣರಾಜ್ಯೋತ್ಸವ ಇರುವ ಕಾರಣ ಇಂದು ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ 2018-19 ನೇ ಸಾಲಿನ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮದ ಮೂರನೇ ತ್ರೈ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಅಪರೂಪಕ್ಕೆ ಕರೆದಿದ್ದ ಸಭೆಯಲ್ಲೆ ಅಧಿಕಾರಿಗಳು  ನಿದ್ದೆ ಮಾಡುತ್ತಿದ್ದು ಕಂಡು ಬಂತು.

ಮೊಬೈಲ್ ನಲ್ಲಿ ಪುಲ್ ಬ್ಯೂಸಿಯಾಗಿದ್ದ ಕೆಲವು ಅಧಿಕಾರಿಗಳು, ತಮಗೂ ಸಭೆಗೂ ಸಂಬಂಧ ಇಲ್ಲಾ ಎಂದು ನಿದ್ದೆಯ ಜೊತೆ ಮೊಬೈಲ್ ನಲ್ಲಿ ಬ್ಯುಜಿಯಾಗಿದ್ದರು. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರ  ಪ್ರದೇಶ ಎಂದು ಘೋಷಣೆ ಆಗಿದೆ.‌ ಇಂತಹ ಗಂಭೀರ ವಿಷಯ ಕುರಿತ ಚರ್ಚೆಯಲ್ಲಿ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ. 




Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ವಿರುದ್ಧ ಭುಗಿಲೆದ್ದ ಆಕ್ರೋಶ