Publish Date: Thu, 24 Jan 2019 (14:07 IST)
Updated Date: Thu, 24 Jan 2019 (14:09 IST)
ನಗರಸಭೆ ಜೆಇ ಪತ್ನಿ ಪಕ್ಕದ ಮನೆಯವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೀದರ್ ನಗರಸಭೆ ಜೆಇ ಹೆಂಡತಿಯಿಂದ ಪಕ್ಕದ ಮನೆ ಕುಟುಂದವರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜಾಗದ ವಿಚಾರಕ್ಕಾಗಿ ನಡೆದ ಗಲಾಟೆಯಲ್ಲಿ ನಗರಸಭೆ ಜೆಇ ಜುಂಜೆರಾವ್ ಪತ್ನಿಯಿಂದ ಹಲ್ಲೆ ನಡೆದಿದೆ. ದೊಣ್ಣೆಯಿಂದ ಪಕ್ಕದ ಮನೆ ಸುಶ್ಮಿತಾ ಮತ್ತು ಕುಟುಂಸ್ಥರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ.
ಬೀದರ್ ನಗರದ ನ್ಯೂ ಆದರ್ಶ ಕಾಲನಿಯಲ್ಲಿ ಘಟನೆ ನಡೆದಿದೆ.
ನಗರಸಭೆ ಜೆಇ ಜುಂಜೆರಾವ್ ಅವೈಜ್ಞಾನಿಕವಾಗಿ ಮನೆ ನಿರ್ಮಾಣ ಮಾಡುತ್ತಿರುವುದಕ್ಕೆ ಪಕ್ಕದ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಮನೆ ನಿರ್ಮಾಣ ಮಾಡುತ್ತಿರುವುದಕ್ಕೆ ದೂರಿ ನಗರಸಭೆ ಕಮಿಷನರ್ ಗೆ ಹೇಳಿದರೂ ನ್ಯಾಯ ಸಿಕ್ಕಿಲ್ಲ.
ಜೆಇ ಜುಂಜೆರಾ ತನ್ನ ಅಧಿಕಾರದ ಪ್ರಭಾವದಿಂದ ಸುಶ್ಮಿತಾ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಕುಟುಂಬ ಸಿಎಂಗೆ ದೂರು ನೀಡಿದ್ದಾರೆ. ಸಿಎಂ ಕಚೇರಿಯ ಕಾರ್ಯದರ್ಶಿಯಿಂದ ಜುಂಜೆರಾ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶ ಬಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.