Publish Date: Fri, 25 Jan 2019 (14:59 IST)
Updated Date: Fri, 25 Jan 2019 (15:01 IST)
ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ತುಮಕೂರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಯಲ್ಲಿ ಸಚಿವ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಬಿಜೆಪಿ ಮುಖಂಡರು ರಮೇಶ್, ಶಿವಪ್ರಸಾದ್ ನೇತೃತ್ವದಲ್ಲಿ ಕಾರ್ಯಕರ್ತರ ಪ್ರತಿಭಟನೆ ನಡೆಯಿತು. ಸಚಿವ ಸಂಪುಟದಿಂದ ಪ್ರಿಯಾಂಕ ಖರ್ಗೆ ವಜಾಗೊಳಿಸುವಂತೆ ಆಗ್ರಹ ಮಾಡಲಾಯಿತು.
ತುಮಕೂರು ಸಿದ್ದಗಂಗಾ ಶ್ರೀಗಳ ಶೋಕಾಚರಣೆ ನಡುವೆಯೂ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ಸಚಿವ ಪ್ರಿಯಾಂಕ ಖರ್ಗೆ ನಡೆಸಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಭಯೋತ್ಪಾದಕರೆಂದು ಹೇಳಿಕೆ ಕೊಟ್ಟಿದ್ದಾರೆ. ಕೂಡಲೇ ಸಂಪುಟದಿಂದ ಖರ್ಗೆಯವರನ್ನು ವಜಾಗೊಳಿಸುವಂತೆ ಆಗ್ರಹ ಮಾಡಲಾಯಿತು.