Publish Date: Fri, 25 Jan 2019 (06:52 IST)
Updated Date: Fri, 25 Jan 2019 (06:53 IST)
ಉಡುಪಿ : ಈಗಲ್ ಟನ್ ರೆಸಾರ್ಟ್ ನಲ್ಲಿಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ಗಣೇಶ್ ಹೊಡೆದಾಡಿಕೊಳ್ಳುವುದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಚಿವೆ ಜಯಮಾಲಾ ಹೊಸ ಆರೋಪ ಮಾಡಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರೇ ರೆಸಾರ್ಟ್ ಗಲಾಟೆಯನ್ನು ಯಾಕೆ ಮಾಡಿಸಿರಬಾರದು. ನಮ್ಮ ಕಣ್ಣಿಗೆ ಕಾಣೋದು ಮಾತ್ರ ಸತ್ಯ ಅನ್ನೋಕಾಗಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಶಾಸಕರು ಗಲಾಟೆ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷ ಏನು ಮಾಡಲು ಸಾಧ್ಯ? ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಇದು ಶಾಸಕರ ವೈಯಕ್ತಿಕ ಜಗಳ. ಬಳ್ಳಾರಿ ಶಾಸಕರು ರೆಸಾರ್ಟಿನಲ್ಲಿ ಹೊಡದಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಯಾರೇ ಹೊಡೆದಾಡಿದರೂ ನಾವು ಸಪೋರ್ಟ್ ಮಾಡಲ್ಲ .ಶಾಸಕರು ಹೊಡೆದುಕೊಂಡರೆ ಕಾಂಗ್ರೆಸ್ ಪಾರ್ಟಿ ಇಮೇಜ್ ಗೆ ಏನೂ ಧಕ್ಕೆಯಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಏನು ಮಾಡಿದೆ? ನಾವೇನು ಹೊಡೆದಾಡಿಕೊಳ್ಳಿ ಅಂತ ಹೇಳಿದ್ವಾ. ಯಾಕೆ ಬೇರೆ ಪಕ್ಷದವರೇನೂ ಹೊಡೆದಾಡಿಕೊಳ್ಳಲ್ವಾ. ಅವರಿಗ್ಯಾರಿಗೂ ಬಾಯಿ ಇಲ್ವಾ, ಕೈ ಇಲ್ವಾ’ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.