Publish Date: Wed, 23 Jan 2019 (18:48 IST)
Updated Date: Wed, 23 Jan 2019 (18:50 IST)
ಮಿಮ್ಸ್ ನಾನ್ ಕ್ಲಿನಿಕಲ್ ಗುತ್ತಿಗೆ ನೌಕರರಿಂದ ಪ್ರತಿಭಟನೆ ನಡೆದಿದೆ.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಮಿಮ್ಸ್ ನಾನ್ ಕ್ಲಿನಿಕಲ್ ಗುತ್ತಿಗೆ ನೌಕರರಿಂದ ನಡೆದ ಪ್ರತಿಭಟನೆ ನಡೆದಿದೆ. ಮಂಡ್ಯ ಮಿಮ್ಸ್ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ, ರತ್ನಮ್ಮ ಎಂಬ ಮಹಿಳೆ ರಜೆ ಹಾಕಿದ್ದಕ್ಕೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.
ನಾನ್ ಕ್ಲಿನಿಕಲ್ ನೌಕರರಿಗೆ ಕೆಲಸಕ್ಕೆ ತೆಗೆದುಕೊಂಡಿರುವ ಏಜೆನ್ಸಿಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಕೂಡಲೇ ಏಜೆನ್ಸಿ ಯವರು ನಾನ್ ಕ್ಲಿನಿಕಲ್ ನೌಕರರ ಬೇಡಿಕೆ ಈಡೇರಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.