Select Your Language

Notifications

webdunia
webdunia
webdunia
webdunia

ಯೂನಿವರ್ಸಿಟಿ ನೂತನ ಪದ್ಧತಿಗೆ ವಿದ್ಯಾರ್ಥಿಗಳ ವಿರೋಧ

ವಿದ್ಯಾರ್ಥಿಗಳು
ಪದವಿ ವಿದ್ಯಾರ್ಥಿಗಳಿಗೆ ಜಾರಿಗೊಳಿಸಿರುವ ನೂತನ ಪದ್ಧತಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಪ್ರತಿಭಟನೆ ಹಾದಿ ತುಳಿದಿದ್ದಾರೆ.

ಮೈಸೂರು ವಿವಿ ಸಿಬಿಸಿ ಎಸ್ ಪದ್ದತಿ ಜಾರಿಗೊಳಿಸಿದ ಹಿನ್ನಲೆಯಲ್ಲಿ ನೂತನ ಪದ್ದತಿ ವಿರುದ್ಧ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ‌ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು.
ಕ್ರಾಫರ್ಡ್ ಹಾಲ್ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನೂತನ ಪದ್ಧತಿಯನ್ನ ಕೈ ಬಿಡುವಂತೆ ಒತ್ತಾಯ ಮಾಡಿದರು.

ನೂತನ ಪದ್ದತಿಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಆದ್ದರಿಂದ ಕೂಡಲೆ ಈ ಪದ್ಧತಿಯನ್ನ ರದ್ದು ಮಾಡಬೇಕು ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಟ್ಯಾಂಕರ್ ಗೆ ಹತ್ತಿದ ಬೆಂಕಿ: ಅನಾಹುತ