Publish Date: Fri, 28 Nov 2025 (11:21 IST)
Updated Date: Fri, 28 Nov 2025 (11:30 IST)
ಪ್ರಧಾನಿ ಮೋದಿ ಕೊನೆಗೂ ಕೃಷ್ಣ ನಗರಿ ಉಡುಪಿಗೆ ಬಂದಿಳಿದಿದ್ದಾರೆ. ಇದೀಗ ಹೆಲಿಪ್ಯಾಡ್ ನಿಂದ ಉಡುಪಿ ಕಡೆ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ.
ಮೋದಿ ಸ್ವಾಗತಕ್ಕೆ ಬೆಳಿಗ್ಗೆಯಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಕಷ್ಟು ಸಂಖ್ಯೆಯಲ್ಲಿ ಬಂದು ಕಾಯುತ್ತಿದ್ದರು. ಮೋದಿಗೆ ಹೂಗಳನ್ನು ಚೆಲ್ಲಿ ಸ್ವಾಗತ ಮಾಡಲಾಗುತ್ತಿದೆ. ಕಾರಿನಲ್ಲಿ ನಿಂತು ಮೋದಿ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾರೆ. ಅದರ ಲೈವ್ ದೃಶ್ಯಾವಳಿ ಇಲ್ಲಿದೆ ನೋಡಿ.