ಮಂಗಳೂರು: ಇಡೀ ವಿಶ್ವವೇ ನಮ್ಮ ಸ್ವಚ್ಛ್ ಭಾರತ್ ಯೋಜನೆ ಬಗ್ಗೆ ಕೊಂಡಾಡುತ್ತಿದೆ. ಆದರೆ ಈ ಕಾಂಗ್ರೆಸ್ ನವರು ಅದರಲ್ಲೂ ಹುಳುಕು ಹುಡುಕುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಇಡೀ ವಿಶ್ವವೇ ನಮ್ಮ ಸ್ವಚ್ಛ್ ಭಾರತ್ ಯೋಜನೆ ಬಗ್ಗೆ ಕೊಂಡಾಡುತ್ತಿದೆ. ಶೌಚಾಲಯ ನಿರ್ಮಾಣ ಮಾಡಿ, ಬಳಸಿ ಎಂಬ ಘೋಷಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಆದರೆ ಕಾಂಗ್ರೆಸ್ ನವರಿಗೆ ಅದರಲ್ಲೂ ಹುಳುಕು ಕಾಣುತ್ತದೆ. ಪ್ರಧಾನಿಯಾಗಿ ಶೌಚಾಲಯದ ಬಗ್ಗೆ ಮಾತನಾಡುತ್ತೀರೆಂದು ಅಣಕಿಸುತ್ತಾರೆ. ಏನು ಹೇಳಲಿ ಇಂತಹ ಮನಸ್ಥಿತಿಗೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!