Publish Date: Wed, 02 May 2018 (09:34 IST)
Updated Date: Wed, 02 May 2018 (09:36 IST)
ಚಿಕ್ಕೋಡಿ: ಮುಂಬರುವ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭಿಸಿರುವ ಪ್ರಧಾನಿ ಮೋದಿ ಚಿಕ್ಕೋಡಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಪ್ರಧಾನಿ ಭಾಷಣದಲ್ಲಿ ಕುಕ್ಕರ್ ವಿಷಯ ಪ್ರಸ್ತಾಪವಾಯಿತು. ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಮತದಾರರಿಗೆ ಆಮಿಷವೊಡ್ಡಲು ಕುಕ್ಕರ್ ವಿತರಿಸಿದ್ದನ್ನು ಪ್ರಧಾನಿ ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿ ಟಾಂಗ್ ಕೊಟ್ಟರು.
‘ಒಬ್ಬರ ಮೇಲೆ ರೈಡ್ ನಡೆಯುತ್ತದೆ. ಆಗ ಕುಕ್ಕರ್ ಜತೆಗೆ ಒಬ್ಬರ ಭಾವಚಿತ್ರವೂ ಸಿಗುತ್ತದೆ. ಇದೇನು ಭ್ರಷ್ಟಾಚಾರವಲ್ಲವೇ?’ ಎಂದು ಮೋದಿ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.