Publish Date: Wed, 02 May 2018 (09:10 IST)
Updated Date: Wed, 02 May 2018 (09:13 IST)
ಬೆಂಗಳೂರು: ಐದು ದಿನಗಳ ರಾಜ್ಯ ಪ್ರವಾಸಕ್ಕೆ ಬಂದಿರುವ ಪ್ರಧಾನಿ ಮೋದಿ ಹಲವೆಡೆ ಚುನಾವಣಾ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಸಾಮಾನ್ಯವಾಗಿ ದಿಲ್ಲಿ ನಾಯಕರು ಕರ್ನಾಟಕದಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡುವಾಗ ಭಾಷಾಂತರ ಮಾಡಲು ಒಬ್ಬರನ್ನು ವೇದಿಕೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಪ್ರಧಾನಿ ಮೋದಿ ಇದುವರೆಗೆ ಭಾಷಾಂತರ ಮಾಡುವವರ ಸಹಾಯ ಪಡೆದಿರಲಿಲ್ಲ.
ಆದರೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ಭಾಷಣದ ಭಾಷಾಂತರಿಸಲು ಸಹಾಯಕರನ್ನು ಪಡೆದಿದ್ದಾರೆ. ಚಾಮರಾಜನಗರದ ಸಂತೆ ಮಾರನಹಳ್ಳಿಯಲ್ಲಿ ಭಾಷಣ ಮಾಡಿದ ಮೋದಿಗೆ ಭಾಷಾಂತರಿಗಳು ಸಹಾಯ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.