Publish Date: Wed, 02 May 2018 (09:14 IST)
Updated Date: Wed, 02 May 2018 (09:16 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರಗೆ ಕೊನೆಯ ಕ್ಷಣದಲ್ಲಿ ವರುಣಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರಣವೇನೆಂದು ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ.
ಚಾಮರಾಜನಗರದಲ್ಲಿ ಚುನಾವಣಾ ಸಮಾವೇಶದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ನ ವಂಶ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನ ನಾಮ್ ದಾರ್ (ಮಂತ್ರಿಗಳ ಮಕ್ಕಳು) ಗಳ ಮುಂದೆ ಕಾಮ್ ದಾರ್ (ಕಾರ್ಯಕರ್ತರು) ಗಳಿಗೆ ಧ್ವನಿಯೆತ್ತಲೂ ಆಗುತ್ತಿಲ್ಲ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ಈ ಮೂಲಕ ವಂಶ ರಾಜಕಾರಣಕ್ಕೆ ಬಿಜೆಪಿ ಕಿಮ್ಮುತ್ತು ಕೊಟ್ಟಿಲ್ಲ ಎಂದು ಸಾರಿದ್ದಾರೆ. ಇದೇ ಕಾರಣಕ್ಕೆ ಬಿಎಸ್ ವೈ ಪುತ್ರನಿಗೂ ಕೊನೆಯ ಕ್ಷಣದಲ್ಲಿ ಟಿಕೆಟ್ ನೀಡದೇ ಇರಲು ಅಮಿತ್ ಶಾ ಮತ್ತು ಬಳಗ ತೀರ್ಮಾನಿಸಿತು ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.