Select Your Language

Notifications

webdunia
webdunia
webdunia
webdunia

ನೋಟಾ ಅಭಿಯಾನ ಕೈ ಬಿಡಿ: ವಿಜಯೇಂದ್ರ ಮನವಿ

ನೋಟಾ ಅಭಿಯಾನ ಕೈ ಬಿಡಿ: ವಿಜಯೇಂದ್ರ ಮನವಿ
ಚಾಮರಾಜನಗರ , ಸೋಮವಾರ, 30 ಏಪ್ರಿಲ್ 2018 (13:12 IST)
ನೋಟಾ ಅಭಿಯಾನ ಕೈಬಿಡುವಂತೆ ಮನವಿ ಮಾಡಿದ ಬಿಎಸ್ ವೈ ಪುತ್ರ ವಿಜಯೇಂದ್ರ.ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. 
ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆಯಲ್ಲಿ ಮನವಿ ಮಾಡಿಕೊಂಡ ವಿಜೆಯೇಂದ್ರ ಅವರು, ಮತ ಯಾಚನೆಗೆ  ಆಗಮಿಸಿದ್ದ  ವೇಳೆ ಈ ಮಾತು ತಿಳಿಸಿದ್ದಾರೆ. 
 
ನೋಟಾ ಅಭಿಯಾನ ಬಗ್ಗೆ ನಿನ್ನೆ ಮೊನ್ನೆಯಿಂದ ಚರ್ಚೆಯಾಗುತ್ತಿದೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕಾದ್ರೆ ದಯವಿಟ್ಟು ನೋಟಾ ಅಭಿಯಾನ ಕೈಬಿಡಿ. ಬಿಜೆಪಿಯ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಪ್ರಯತ್ನ ಮಾಡಬೇಕೆ ಹೊರತು ಬೇರೆ ಚಟುವಟಿಕೆಯಲ್ಲಿ ತೊಡಗಬಾರದು.
 
ವರುಣಾ ಕ್ಷೇತ್ರದ ಅಭ್ಯರ್ಥಿ ಅಪೇಕ್ಷೆ ಪಟ್ಟರೆ ನಾನು ಅಲ್ಲಿ ಪ್ರಚಾರ ಮಾಡ್ತೇನೆ.ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರ ಚಾಮ ರಾಜನಗರ, ಮೈಸೂರಿಗೆ ಮಾತ್ರ  ಸೀಮಿತವಾಗಿಲ್ಲ. ಸಮಯ ಸಿಕ್ಕರೆ ಎಲ್ಲ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣದಲ್ಲಿ ರಂಗೇರಿದ ಪ್ರಚಾರ