Select Your Language

Notifications

webdunia
webdunia
webdunia
webdunia

ಪ್ರಕೃತಿ ವಿಕೋಪಕ್ಕೆ ತಿಂಗಳ ವೇತನ ನೀಡಿದ ದೈಹಿಕ ಶಿಕ್ಷಕ

ಪ್ರಕೃತಿ ವಿಕೋಪಕ್ಕೆ ತಿಂಗಳ ವೇತನ ನೀಡಿದ ದೈಹಿಕ ಶಿಕ್ಷಕ
ಯಾದಗಿರಿ , ಭಾನುವಾರ, 19 ಆಗಸ್ಟ್ 2018 (18:41 IST)
ಕಣ್ಣೆದುರಿಗೆ ತೀವ್ರ ಸಂಕಷ್ಟದಲ್ಲಿರುವ ಜನರಿದ್ದರೂ ಒಂದು ರೂಪಾಯ ದಾನ ಮಾಡಬೇಕಾದರೂ ಹಿಂದೇಟು ಹಾಕುವ ದಿನಗಳಲ್ಲಿ ನಿವೃತ್ತ ಶಿಕ್ಷಕರೊಬ್ಬರು ಪ್ರಕೃತಿ ವಿಕೋಪಕ್ಕೆ ತಮ್ಮ ತಿಂಗಳ ವೇತನ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಹಾಮಳೆಗೆ ತತ್ತರಿಸಿರುವ ಕೇರಳ ಹಾಗೂ ರಾಜ್ಯದ ಕೊಡಗು ಜಿಲ್ಲೆಗಳ ಜನರು ಸಂಕಷ್ಟದಲ್ಲಿದ್ದಾರೆ. ಜಲ ಪ್ರಳಯ ಪೀಡಿತರಿಗೆ ರಾಜ್ಯದ ನಾನಾ ಭಾಗಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ಏತನ್ಮಧ್ಯೆ ಯಾದಗಿರಿ ಜಿಲ್ಲೆ ಶಹಾಪುರದ ನಿವೃತ್ತ ದೈಹಿಕ ಶಿಕ್ಷಕ ಸೋಮಶೇಖರಯ್ಯ ಹಿರೇಮಠ ತಮ್ಮ ಒಂದು ತಿಂಗಳ ಪಿಂಚಣಿ 21 ಸಾವಿರದ 500 ರೂ.ಗಳನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಂತ್ರಸ್ಥರಿಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬನ್ ಪಾರ್ಕ್ ನಲ್ಲಿ ಅನುಮಾನಾಸ್ಪದ ರೀತಿ ಯುವತಿ ಶವ ಪತ್ತೆ