Publish Date: Sun, 19 Aug 2018 (14:03 IST)
Updated Date: Sun, 19 Aug 2018 (14:07 IST)
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ. ಸದಾನಂದ ಗೌಡ, ಈಗಾಗಲೇ ಕೇಂದ್ರ ಸರಕಾರ ಎನ್ ಡಿ ಆರ್ ಎಫ್ ಪಡೆ, ನೌಕಾ ಹೆಲಿಕ್ಯಾಪ್ಟರ್ ಗಳನ್ನೂ ಎಲ್ಲ ಕಡೆಗೆ ಕಳುಹಿಸಿ ಕೊಟ್ಟಿದೆ. ಜಲ ಪ್ರಳಯದಿಂದಾಗಿ ಕೊಡಗು ಜಿಲ್ಲೆಗೆ ಭಾರೀ ಹಾನಿ ಆಗಿದೆ. 2000 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಗೆ ಒಳಗಾಗಿವೆ.
ರಾಜ್ಯ ಸರಕಾರ ಅಗತ್ಯವಿರುವ ನೆರವುಗಳ ಕುರಿತು ಪಟ್ಟಿ ಸಲ್ಲಿಸಿದರೆ, ಕೇಂದ್ರ ಸರಕಾರ ಎಲ್ಲಾ ನೆರವು ನೀಡಲಾಗುವುದು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಭೇಟಿ ಮಾಡಿ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.