Publish Date: Sun, 19 Aug 2018 (18:03 IST)
Updated Date: Sun, 19 Aug 2018 (18:06 IST)
ರಾಜ್ಯದ ಹಲವೆಡೆ ಮಳೆ ಮುಂದುವರಿದಿರುವಂತೆ ಪ್ರವಾಹ ಪರಿಸ್ಥಿತಿ ಇನ್ನೂ ಕೊನೆಗೊಂಡಿಲ್ಲ. ಏತನ್ಮಧ್ಯೆ ಹವಾಮಾನ ವೈಪರೀತ್ಯವು ಪರಿಹಾರ ಕಾರ್ಯಾಚರಣೆ ಅಡ್ಡಿಯಾಗಿದೆ.
ಮಡಿಕೇರಿ, ಕೊಡಗು ಸೇರಿದಂತೆ ಮೊದಲಾದ ಜಲ ಪ್ರಳಯದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಬಿರುಸಿನ ಪ್ರಯತ್ನ ಮುಂದುವರಿದಿದೆ. ಈ ನಡುವೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಕಾರ್ಯಾಚರಣೆ ನಡೆಸಲು ಪ್ರತಿಕೂಲ ಹವಾಮಾನ ತಡೆಯೊಡ್ಡುತ್ತಿದೆ. ಹೀಗಾಗಿ ಪರಿಹಾರ ಕಾರ್ಯಾಚರಣೆಗೆ ತಾತ್ಕಾಲಿಕ ಅಡ್ಡಿಯುಂಟಾಗುತ್ತಿದೆ.
ಮಡಿಕೇರಿಯಲ್ಲಂತೂ ನೀರು ಹಾಗೂ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಸೇನೆ ಹಾಗೂ ಎನ್ ಡಿ ಆರ್ ಎಫ್ ತಂಡಗಳು ನಿರತವಾಗಿವೆ. ಬಹುತೇಕ ಗ್ರಾಮಗಳ ರಸ್ತೆಗಳ ಸಂಚಾರ ಬಂದ್ ಆಗಿದೆ.