Select Your Language

Notifications

webdunia
webdunia
webdunia
webdunia

ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕರ ಭೇಟಿ: ಜನರ ರಕ್ಷಣೆ

ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕರ ಭೇಟಿ: ಜನರ ರಕ್ಷಣೆ
ಕೊಡಗು , ಭಾನುವಾರ, 19 ಆಗಸ್ಟ್ 2018 (14:28 IST)
ಆ ಕ್ಷೇತ್ರದ ಶಾಸಕ ಅಪಾಯದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಕಾರ್ಯಕರ್ತರೊಂದಿಗೆ ಪ್ರವಾಹ ಪೀಡಿತ ಸ್ಥಳಕ್ಕೆ ತೆರಳಿ ಜನರನ್ನು ರಕ್ಷಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಮಾದಾಪುರ ವ್ಯಾಪ್ತಿಯಲ್ಲಿ ಇರುವ ಹಟ್ಟಿಹೊಳೆ ಹುಕ್ಕಿ ಹರಿಯುತ್ತಿದ್ದು ಅಲ್ಲಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಣೆಗೆ ಮುಂದಾಗಿದ್ದಾರೆ.

ಹಟ್ಟಿಹೊಳೆ ಹುಕ್ಕಿ ಹರಿಯುತ್ತಿದ್ದು, ಪ್ರವಾಹದಲ್ಲಿ ಸಿಲುಕಿ ಸೇನಾ  ರಕ್ಷಣಾ ಪಡೆಗಳಿಗೂ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸ್ವತಃ ಕಾರ್ಯಕರ್ತರೊಂದಿಗೆ  ಕಾರ್ಯಾಚರಣೆಗೆ ಇಳಿದ ಶಾಸಕ ರಂಜನ್, ನೂರಾರು ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣೆಗೊಳಗಾದ ಜನರನ್ನು ಗಂಜಿ ಕೇಂದ್ರಕ್ಕೆ  ಕಳಿಸಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸಂತ್ರಸ್ಥರಿಗಾಗಿ ಆಹಾರ ಪದಾರ್ಥ ಸಂಗ್ರಹಿಸಿದ ವಿಶಿಷ್ಟ ಚೇತನ!