Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

‘ದಯವಿಟ್ಟು ಪ್ರಧಾನಿ ಮೋದಿಗೆ ಹೇಳಿ..’ ಎನ್ನುತ್ತಾ ಕಣ್ಣೀರು ಹಾಕಿದ ಕೇರಳ ಶಾಸಕ

webdunia
ಭಾನುವಾರ, 19 ಆಗಸ್ಟ್ 2018 (09:03 IST)
ತಿರುವನಂತಪುರಂ: ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜನ ಜೀವನ ತೀರಾ ಹದಗೆಟ್ಟಿದೆ. ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲು ಪರದಾಡುತ್ತಿರುವಾಗ ಶಾಸಕರೊಬ್ಬರೇ ಟಿವಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಚೆಂಗನ್ನೂರು ಶಾಸಕ ಸಾಜಿ ಚೆರಿಯನ್  ತಮ್ಮ ಕ್ಷೇತ್ರದಲ್ಲಿ ಜನರ ಅವಸ್ಥೆ ಕಂಡು ದುಃಖ ತಡೆಯಲಾಗದೇ ಟಿವಿ ಕ್ಯಾಮರಾ ಎದುರು ‘ದಯವಿಟ್ಟು ಪ್ರಧಾನಿ ಮೋದಿಗೆ ಯಾರಾದರೂ ಇಲ್ಲಿಗೆ ಹೆಲಿಕಾಪ್ಟರ್ ಕಳುಹಿಸಿಕೊಡಲು ಹೇಳಿ.. ಇಲ್ಲವಾದರೆ ಇಲ್ಲಿನ ಜನ ಸಾಯ್ತಾರೆ’ ಎಂದು ಕಣ್ಣೀರು ಹಾಕಿದ್ದಾರೆ.

‘ನಮ್ಮ ಜನರ ಬಳಿ ಸಣ್ಣ ಪುಟ್ಟ ದೋಣಿ, ತೆಪ್ಪಗಳಿವೆ. ಇಲ್ಲಿ ನೀರು ಭಾರೀ ರಭಸವಾಗಿ ಹರಿಯುತ್ತಿದ್ದು, ತೆಪ್ಪಗಳ ಮೇಲೆ ಕುಳಿತು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ನಮಗೆ ಹೆಲಿಕಾಪ್ಟರ್ ಕಳುಹಿಸಿಕೊಡಿ ‘ ಎಂದು ಶಾಸಕ ಚೆರಿಯನ್ ಅಲವತ್ತುಗೈದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯನ್ನು ಟೀಕಿಸಿದಕ್ಕೆ ಫ್ರೊಫೆಸರ್ ಗೆ ಬಿತ್ತು ಗೂಸಾ