Select Your Language

Notifications

webdunia
webdunia
webdunia
webdunia

ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಜನರ ಕೂಗು

People's cry for multi specialty hospital in North Kannada district
bangalore , ಶನಿವಾರ, 30 ಜುಲೈ 2022 (15:39 IST)
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಬೇಕೆಂಬ ಕೂಗು ಕೇಳಿಬರುತ್ತಿದೆ. ನಗರದ ಫ್ರೀಡಂ ಪಾಕ್೯ ನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರು ಭಾಗಿಯಾಗಲಿದ್ದಾರೆ.ಇನ್ನು ಪ್ರಮುಖವಾಗಿ ಪ್ರತಿಭಟನೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಚಿತ್ರ ನಟ-ನಟಿಯರು, ಸಾಹಿತಿಗಳು ಭಾಗಿಯಾಗಲಿದ್ದಾರೆ.ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮುಖಾಂತರ ಅಭಿಯಾನ ಆರಂಭವಾಗಿದ್ದು,ಪ್ರತಿಭಟನೆ ಬಳಿಕ ಮಧ್ಯಾಹ್ನ ಸಿಎಂಗೆ ಉತ್ತರ ಕನ್ನಡ ಜಿಲ್ಲೆಯ ಮುಂಖಾಡರು ಮನವಿ ಮಾಡಲಿದಾರೆ.ಆಸ್ಪತ್ರೆ ಮಾಡುವ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಹಾಗೂ ಶಿವರಾಮ್ ಹೆಬ್ಬಾರ್ ಈಗಾಗಲೇ ಭರವಸೆ ನೀಡಿದ್ದಾರೆ.
 
ಸಿಎಂ ಆಗಸ್ಟ್ ಮೊದಲ ವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗಲಿದ್ದಾರೆ.ಪ್ರವಾಸದ ವೇಳೆ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಲ್ ಆಸ್ಪತ್ರೆ ಮಾಡಬೇಕೆಂದಯ ಒತ್ತಾಯ ಹಾಕುತ್ತಿದ್ದಾರೆ.ಇನ್ನು ಈ ಹಿನ್ನೆಲೆ ಉತ್ತರ ಕನ್ನಡ ಜನರು ಆಸ್ಪತ್ರೆ ಬೇಕೇ ಬೇಕೆಂದು ಬೃಹತ್ ಪ್ರತಿಭಟನೆ ಮೂಲಕ ಸಿಎಂಗೆ ಎಚ್ಚರಿಕೆ ಕೂಡ ನೀಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ ಗೈದ ಪತಿ!