Select Your Language

Notifications

webdunia
webdunia
webdunia
webdunia

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಜನರ ಪ್ರತಿಭಟನೆ

ಸಿಇಓ
ಜಿಲ್ಲಾ ಪಂಚಾಯತ್ ಸಿಇಓ ಮೇಲೆ ಎಸಿಬಿ ಪ್ರಕರಣ ದಾಖಲಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ ತೀವ್ರಗೊಂಡಿದೆ.

ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಓ ಉದ್ಯೋಗಖಾತ್ರಿ ಯೋಜನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಎಸಿಬಿ ಪ್ರಕರಣ ದಾಖಲಿಸಿರುವ ಅಧ್ಯಕ್ಷರ ನಡೆ ಖಂಡನೀಯ ಎಂದು ಉದ್ಯೋಗಖಾತ್ರಿ ಕೂಲಿಕಾರ್ಮಿಕರಿಂದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ನಡೆಯಿತು.  

ಎಸಿಬಿ ಪ್ರಕರಣ ದಾಖಲಿಸಿದ್ದನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಾಪಸ್ಸು ಪಡೆಯಬೇಕೆಂದು ಆಗ್ರಹ ಮಾಡಲಾಯಿತು. ಎಸಿಬಿ ಕೇಸ್ ನ್ನು ವಾಪಸ್ಸು ಪಡೆಯುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಕೂಲಿಕಾರರು ಪಟ್ಟು ಹಿಡಿದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ವ್ಯಕ್ತಿಯ ಕೈ- ಕಾಲು ಕಟ್ಟಿ ದರೋಡೆ