Select Your Language

Notifications

webdunia
webdunia
webdunia
webdunia

ಅಹೋರಾತ್ರಿ ಧರಣಿ: ಕಾರಣ ಏನು ಗೊತ್ತಾ?

ಮುಖ್ಯರಸ್ತೆ
ಬಳ್ಳಾರಿ , ಮಂಗಳವಾರ, 11 ಡಿಸೆಂಬರ್ 2018 (15:17 IST)
ಮಿಲ್ಕಾರ್ ಪೇಟೆಯ ಸಮಸ್ಯೆಗಾಗಿ ಅಲ್ಲಿನ ಜನರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಬಳ್ಳಾರಿ ನಗರದ ಮಿಲ್ಕಾರ್ ಪೇಟೆಯ ಮುಖ್ಯರಸ್ತೆಯನ್ನು ಸರಿಪಡಿಸಲು ಆಗ್ರಹಿಸಿ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಲಿದೆ.

ನಗರದ ಮಿಲ್ಲಾರಪೇಟೆ ಯಿಂದ ಅಂದಾಳ್ ರಸ್ತೆ ಹದಗೆಟ್ಟು 15 ವರ್ಷಗಳಾದರೂ ದುರಸ್ತಿಮಾಡದಿರುವುದನ್ನು ಖಂಡಿಸಿ ಕರ್ನಾಟಕ ಜನಸೈನ್ಯ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಅಗಮಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಹೋರಾತ್ರಿ ಧರಣಿಯ ಜೊತೆ ಸತ್ಯಾಗ್ರಹ ಉಗ್ರರೂಪ ಪಡೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಹಲವು ಬಾರಿ ರಸ್ತೆ ದುರಸ್ತಿಗಾಗಿ ಮನವಿ ಸಲ್ಲಿಸಿದರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಜಿಲ್ಲಾಡಳಿತದ ಈ ನಡೆಯನ್ನು ಖಂಡಿಸಿ ಸಂಘಟನೆ ವತಿಯಿಂದ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಸ್. ಅಶೋಕ ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಅಧಿಕಾರಿ ಬಂಧನ