Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​​​​ ಸರ್ಕಾರಕ್ಕೆ ಜನ ಶಾಪ ಹಾಕ್ತಿದ್ದಾರೆ

cm sidaramayya
bangalore , ಭಾನುವಾರ, 26 ನವೆಂಬರ್ 2023 (17:00 IST)
ಚಳಿಗಾಲದ ಅಧಿವೇಶನದಲ್ಲಿ ಬರಗಾಲದ ವಿಚಾರವನ್ನೇ ಮೊದಲಿಗೆ ಎತ್ತಿಕೊಳ್ಳಲಿದ್ದೇವೆ ಅಂತಾ ವಿಪಕ್ಷ ನಾಯಕ ​​​​​ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ.

ರೈತರು ಟಿಸಿ ಅಳವಡಿಕೆ ವೇಳೆ ಗ್ರೌಂಡಿಂಗ್ ಉಪ್ಪನ್ನೂ ಕೂಡ ರೈತರೆ ಕೊಡಬೇಕಾದ ಪರಿಸ್ಥಿತಿ ಇದೆ. ಇವರ ಯೋಗ್ಯತೆಗೆ ಕನಿಷ್ಠ ಉಪ್ಪು ಕೂಡ ಕೊಡೋಕಾಗ್ತಿಲ್ಲ ಅಂದ್ರೆ ಈ ಸರ್ಕಾರ ಇದ್ರೇಷ್ಟು ಬಿಟ್ರೇಷ್ಟು ಅಂತಾ ಜನ ಶಾಪ ಹಾಕ್ತಿದ್ದಾರೆ.

ರೈತರ ಸಾಲ ಮನ್ನಾ ಮಾಡ್ಬೇಕು ಅಂತಾ ಹೇಳ್ತಿದ್ದಾರೆ. ರೈತರ ಸಮಸ್ಯೆ ಏನು ಅನ್ನೋದನ್ನ ಅವರಿಂದಲೇ ಕೇಳಿ ತಿಳಿದುಕೊಳ್ತಿದ್ದೀವಿ. ಇವೆಲ್ಲ ಬೆಳವಣಿಗೆಯನ್ನ ನೋಡಿದ್ರೆ ಸರ್ಕಾರ ಗೋವಿಂದ ಆಗಲಿದೆ. ಅವ್ರೇ ಮುಹೂರ್ತ ಮಾಡಿಕೊಂಡ ಹಾಗೆ ಪಾರ್ಲಿಮೆಂಟ್ ಎಲೆಕ್ಷನ್ ಬಳಿಕ ಸರ್ಕಾರ ಗೋವಿಂದ ಆಗುತ್ತೆ ಅಂತಾ ಕಾಂಗ್ರೆಸ್​​​ ಸರ್ಕಾರದ ವಿರುದ್ಧ R.ಆಶೋಕ್ ಕಿಡಿಕಾರಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯರನ್ನ ಇಳಿಸೋಕೆ ಒಂದು ಗ್ಯಾಂಗ್ ರೆಡಿ