Publish Date: Sun, 26 Nov 2023 (15:42 IST)
Updated Date: Sun, 26 Nov 2023 (16:46 IST)
ರಾಜ್ಯ ಕಾಂಗ್ರೆಸ್ನಲ್ಲಿ ಜಾತಿ ಜಟಾಪಟಿ ಜೋರಾಗಿದ್ದು, ಜಾತಿ ಗಣತಿ ಬಿಡುಗಡೆಯಾದ್ರೆ ಆಪತ್ತು ಖಂಡಿತ ಅಂತಾ ಕೈ ಶಾಸಕ ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ಸಂದೇಶವನ್ನ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವರದಿ ಅಂಗೀಕರಿಸದಂತೆ ನಾವೂ ಮನವಿ ಸಲ್ಲಿಸುತ್ತೇವೆ. ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡುತ್ತೇವೆ. ಪ್ರತ್ಯೇಕ ಧರ್ಮದ ರೀತಿಯಲ್ಲಿ ಕಾಂಗ್ರೆಸ್ಗೆ ತೊಂದರೆಯಾಗುತ್ತದೆ. ವರದಿಗೆ ಬಿಜೆಪಿ, ಜೆಡಿಎಸ್ ವಿರೋಧವಿದೆ. ಸಿಎಂ ಸಿದ್ದರಾಮಯ್ಯ ಜೊತೆ ನಾವೂ ಚರ್ಚಿಸಿದ್ದೇವೆ. ಒಕ್ಕಲಿಗರ ರೀತಿಯೇ ನಮ್ಮ ವಿರೋಧವಿದೆ ಎಂದು ಹೇಳಿದ್ರು.