Select Your Language

Notifications

webdunia
webdunia
webdunia
webdunia

ಪೆನ್‌ಡ್ರೈವ್ ಪ್ರಕರಣ: ಕುಮಾರಸ್ವಾಮಿಗೆ ಗೊತ್ತಿರುವ ತಿಮಿಂಗಲದ ಮಾಹಿತಿ ನೀಡಲಿ ಎಂದ ಪರಮೇಶ್ವರ್

H D Kumaraswamy

Sampriya

ಬೆಂಗಳೂರು , ಬುಧವಾರ, 15 ಮೇ 2024 (20:35 IST)
Photo Courtesy X
ಬೆಂಗಳೂರು: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿರುವ ಪೆನ್ ಡ್ರೈವ್ ಹಂಚಿಕೆ ಮಾಡಿದ ತಿಮಿಂಗಿಲ ಯಾರೆಂದು ಎಚ್‌ಡಿ ಕುಮಾರಸ್ವಾಮಿಗೆ ಗೊತ್ತಿದ್ದರೆ ಮಾಹಿತಿ ಕೊಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ತಿಮಿಂಗಿಲ ಯಾರು ಅಂತ ಗೊತ್ತಿದ್ದರೆ ಹೇಳಬಹುದಲ್ವ. ಗೊತ್ತಿದ್ದು ಹೇಳದೆ ಇದ್ದರೆ ಅದು ತಪ್ಪಾಗುತ್ತದೆ. ಕುಮಾರಸ್ವಾಮಿ ಅವರು ತಿಮಿಂಗಲದ ಬಗ್ಗೆ ಹೇಳಿದರೆ ಎಲ್ಲವೂ ಮುಗಿದು ಹೋಗುತ್ತದೆ ಎಂದರು.

ಇನ್ನೂ ಸಿಎಂ ಜತೆಗಿನ ಸಭೆ ಬಗ್ಗೆ ಮಾತನಾಡಿದ ಅವರು, ಸಿಎಂ ಕಡೆಯಿಂದ ಕೆಲ ಸೂಚನೆಗಳು ಇದ್ದಾವೆ. ಆದರೆ ನಿಮಗೆ ಹೇಳಲ್ಲ. ಜಾರಕಿಹೊಳಿ ಅವರ ಮನೆಗೆ ಹೋಗಿದ್ದೆ. ಅವರ ಮಗಳು ಚುನಾವಣೆಗೆ ನಿಂತಿದ್ರು. ಅದರ ಬಗ್ಗೆ ಹೋಗಿ ಚರ್ಚೆ ಮಾಡಿದ್ದೆ ಎಂದರು.





Share this Story:

Follow Webdunia kannada

ಮುಂದಿನ ಸುದ್ದಿ

27 ವಾರಗಳ ಭ್ರೂಣ ತೆಗೆಯಲು ನಿರಾಕರಿಸಿದ ಸುಪ್ರೀಂಕೋರ್ಟ್