Publish Date: Sun, 12 May 2024 (12:42 IST)
Updated Date: Sun, 12 May 2024 (12:45 IST)
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಚುರುಕು ಮಾಡಿದ್ದು, ಇದೀಗ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಿಬ್ಬರುನ್ನು ಎಸ್‌ಐಟಿ ವಶಕ್ಕೆ ಪಡೆಯುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪೆನ್‌ಡ್ರೈವ್ ವೈರಲ್ ವಿಚಾರದಲ್ಲಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅತ್ಯಾಪ್ತ ಲಿಖಿತ್‌ಗೌಡ ಹಾಗೂ ಯಲಗುಂದ ಚೇತನ್ ಎಂಬ ಇಬ್ಬರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ.
ನಿನ್ನೆ ತಡರಾತ್ರಿ ಇವರಿಬ್ಬರನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದಿದೆ. ಇವರಿಬ್ಬರು ಮಾಜಿ ಶಾಸಕ ಪ್ರೀತಂ ಗೌಡ ಅವರ ಕಚೇರಿ ಸಿಬ್ಬಂದಿ ಹಾಗೂ ಆಪ್ತ ನಿಖಿತ್ ಎನ್ನಲಾಗಿದೆ.
ಹಾಸನದ ನಗರ ಪೊಲೀಸ್ ಠಾಣೆ ಸಮಚ್ಚಯದಲ್ಲಿರುವ ಸೈಬರ್ ಕ್ರೈಂ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಬಂದನ ತೀವ್ರ ಕುತೂಹಲ ಮೂಡಿಸಿದೆ.
Sampriya
Publish Date: Sun, 12 May 2024 (12:42 IST)
Updated Date: Sun, 12 May 2024 (12:45 IST)