ಬೆಂಗಳೂರು: ಕೊರೋನಾ ಮೂರನೇ ಅಲೆ ಭೀತಿ, ಒಮಿಕ್ರಾನ್ ವೈರಸ್ ಬಗ್ಗೆ ಸುದ್ದಿ ಹೆಚ್ಚಾಗುತ್ತಿದ್ದಂತೇ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ.
ಹೆಚ್ಚಿನ ಶಾಲೆಗಳು ಪುನರಾರಂಭವಾಗಿದ್ದರೂ ಇನ್ನೂ, ಆನ್ ಲೈನ್ ತರಗತಿಯ ಆಯ್ಕೆಯನ್ನೂ ತೆರೆದಿಟ್ಟಿವೆ. ಇತ್ತೀಚೆಗೆ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಸುದ್ದಿಗಳ ಬೆನ್ನಲ್ಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.
ಆಫ್ ಲೈನ್ ತರಗತಿಗಿಂತ ಆನ್ ಲೈನ್ ತರಗತಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ವಿಪರೀತ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಶಾಲೆಗೆ ಕಳುಹಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.