Publish Date: Wed, 01 Dec 2021 (09:10 IST)
Updated Date: Wed, 01 Dec 2021 (09:22 IST)
ಕುಶಾಲನಗರ: ಅಪ್ರಾಪ್ತ ವಯಸ್ಸಿನ ಮಗಳಿಗೆ ಸ್ಕೂಟರ್ ಚಾಲನೆ ನೀಡಿ ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಗೆ ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಲಾಗಿದೆ.
58 ವರ್ಷದ ಅಂಥೋಣಿ ಎಂಬವರು ಶಿಕ್ಷೆಗೊಳಗಾದವರು. ಇದೇ ವರ್ಷ ಜನವರಿಯಲ್ಲಿ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ನಡೆದಿತ್ತು. ಅಂಥೋಣಿ ಪುತ್ರಿ ಸ್ಕೂಟಿ ಚಲಾಯಿಸಿದ್ದಳು.
ಅಪ್ರಾಪ್ತ ಮಗಳಿಗೆ ಸ್ಕೂಟಿ ನೀಡಿದ್ದು ತಪ್ಪು ಎಂದ ನ್ಯಾಯಾಲಯ 25 ಸಾವಿರ ದಂಡದ ಜೊತೆಗೆ ಒಂದು ದಿನದ ಜೈಲು ಶಿಕ್ಷೆ ನೀಡಿತು. ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡುವುದು ಪೋಷಕರ ಬೇಜವಾಬ್ಧಾರಿ ಎಂದು ನ್ಯಾಯಾಲಯ ಹೇಳಿದೆ.