Publish Date: Thu, 17 Jan 2019 (19:46 IST)
Updated Date: Thu, 17 Jan 2019 (19:48 IST)
ಗಾಂಜಾ ಮಾರಾಟ ಮಾಡುತ್ತಿದ್ದವನ ಮೇಲೆ ದಾಳಿ ನಡೆಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಾಗಮಂಗಲ ಪೊಲೀಸರು ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿ ಅಮ್ಮ ದೇವಸ್ಥಾನದ ಬಳಿ ಅಕ್ರಮ ಗಾಂಜಾ ಮಾರಲು ಹೊಂಚುಹಾಕುತ್ತಿದ್ದ ವೇಳೆ ಮಾಲು ಸಮೇತ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮೈಸೂರಿನ ಎನ್. ಆರ್. ಮೊಹಲ್ಲಾ ವಾಸಿ ಪೈರೋಜ್ ಖಾನ್ ಬಿನ್ ಪ್ಯಾರೆ ಜಾನ್ (45) ಎಂಬಾತನೇ ಆರೋಪಿಯಾಗಿದ್ದಾನೆ.
ನಾಗಮಂಗಲ ತಹಶೀಲ್ದಾರ್ ನೇತೃತ್ವದಲ್ಲಿ, ಸಿಪಿಐ ನಂಜಪ್ಪ ಮಾರ್ಗದರ್ಶನದಲ್ಲಿ ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯಿಂದ 2 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೋರ್ಟಗೆ ಹಾಜರು ಪಡಿಸಲಾಗಿದೆ.