ಮೋಜು ಮಸ್ತಿ ಮಾಡಲು ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಖದೀಮರ ಜಾಲವನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರ ಹಾಗೂ ಖಾನಾಪುರ ತಾಲೂಕಿನಲ್ಲಿ ಬೈಕ್ ಖದಿಯುತ್ತಿದ್ದ 9 ಜನರನ್ನು ಒಳಗೊಂಡ ಗ್ಯಾಂಗ್‌ನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 13 ಬೈಕ್ ವಶಪಡಿಸಿಕೊಳ್ಳಲಾಗಿದೆ. ಖಾನಾಪುರದ ಕಿಶನ್ ನಾಯಕ್, ವಿವೇಕ ಅವಲಕ್ಕಿ, ರಾಹುಲ್ ಬುರುಡ, ರಾಮಲಿಂಗ ಸುಳಕರ, ಓಂಕಾರ್ ಕಣಬರಕರ್, ಅಶುತೋಷ ದೇಸಾಯಿ, ಮನಸು ಕುಂಬಾರ್ ಹಾಗೂ ಬೆಳಗಾವಿಯ ವಡಗಾವಿ ನಿವಾಸಿ ಅಮಿತ್ ನಾಯಿಕ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ಎಲ್ಲ ಆರೋಪಿಗಳು ಕದ್ದ ಬೈಕ್‌ಗಳನ್ನು ಮಾರಾಟ ಮಾಡಿ, ಮೋಜು ಮಸ್ತಿ ಮಾಡುತ್ತಿದ್ದರು ಎಂದು ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ. ಬೈಲಹೊಂಗಲ ಡಿವೈಎಸ್‌ಪಿ ಜೆಎಂ ಕರುಣಾಕರಶೆಟ್ಟಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು, ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.