Publish Date: Mon, 14 Jan 2019 (17:10 IST)
Updated Date: Mon, 14 Jan 2019 (17:14 IST)
ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಾರದ ಲೋಕಕ್ಕೆ ಕಳಿಸಿದ್ದಾನೆ.
ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕತ್ತು ಹಿಸುಕಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಹೊರಮಾವು ಮುಖ್ಯ ರಸ್ತೆಯ ಪ್ರೇರಣಾ ಟ್ರಾ ಕ್ಯೂಲ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಗೀತಾದೇವಿ ಕೊಲೆಯಾದ ಗೃಹಿಣಿಯಾಗಿದ್ದಾಳೆ. ಬಿಹಾರ ಮೂಲದ ಆನಂದ್ (31) ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ದಂಪತಿ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕುಡಿತಕ್ಕೆ ಅಂಟಿಕೊಂಡಿದ್ದ ಆನಂದ್ ತನ್ನ ಪತ್ನಿ ಗೀತಾದೇವಿ ಜತೆ ನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಜಗಳ ತಾರಕಕ್ಕೇರಿ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.