Select Your Language

Notifications

webdunia
webdunia
webdunia
webdunia

ಕುರ್ಚಿ ಗುದ್ದಾಟದ ನಡುವೆ ಕುತೂಹಲ ಮೂಡಿಸಿದ ಪರಮೇಶ್ವರ್ ಹೇಳಿಕೆ

G Parameshwar
ಬೆಂಗಳೂರು: ಈಚೆಗೆ ಸಿಎಂ ಆಗಲೂ ನಾನೂ ಕೂಡಾ ಸಮರ್ಥನೂ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಗೇಹ ಸಚಿವ ಜಿ ಪರಮೇಶ್ವರ್ ಅವರು ಬೆಂಬಲಿಗರು ಮುಂದಿನ ಸಿಎಂ ತಾವೇ ಎಂದು ಘೋಷಣೆಗಳಿಂದ ದೂರ ಉಳಿದಿದ್ದಾರೆ. 

ತುಮಕೂರಿನಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ತಮ್ಮ ಬೆಂಬಲಿಗರು ಎತ್ತಿದ್ದ ಘೋಷಣೆಗಳಿಂದ ದೂರ ಉಳಿದಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಾವುದೇ ನಿರ್ಧಾರವು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು, ಆ ಹುದ್ದೆಗಾಗಿ ಊಹಾಪೋಹ ಅಥವಾ ಲಾಬಿಗೆ ಉತ್ತೇಜನ ನೀಡುವುದಿಲ್ಲ. ತಮ್ಮ ಬೆಂಬಲಿಗರು ಎತ್ತಿದ ಘೋಷಣೆಗಳಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಪಕ್ಷದ ನಾಯಕತ್ವವು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತದೆ ಎಂದು ಪುನರುಚ್ಚರಿಸಿದರು.

ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ನಡೆಸುತ್ತಿರುವ ಲಾಬಿಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಇನ್ಮುಂದೆ ಯಾವುದೇ ಗೊಂದಲ ಸೃಷ್ಟಿಸಲು ಸಿದ್ಧನಿಲ್ಲ. ನಮ್ಮ ಹೈಕಮಾಂಡ್ ಈ ಸಂಬಂಧ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದರು. ನಾನು ಯಾವುದೇ ಲಾಬಿ ಮಾಡುವುದಿಲ್ಲ. ನಿನ್ನೆ ನಾನು ಹೇಳಿದ್ದನ್ನು ನೀವು ಕೇಳಲಿಲ್ಲವೇ? ನಾನು ದೆಹಲಿಗೆ ಹೋಗುವ ಕುರಿತು ಯಾರೋ ಕೇಳಿದರು. ನಾನು ದೆಹಲಿಗೆ ಹೋಗಲಿಲ್ಲ. ಅಷ್ಟೇ' ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

Video: ನಾನೂ, ನನ್ನ ಸಹೋದರಿ ಜಗಳ ಮಾಡಿದ್ವಿ: ಪ್ರಿಯಾಂಕಾಗೆ ಹೀಗೆ ಮ್ಯಾಜಿಕ್ ಮಾಡಿದ್ರಂತೆ ರಾಹುಲ್ ಗಾಂಧಿ