Publish Date: Wed, 25 Feb 2026 (19:08 IST)
Updated Date: Wed, 25 Feb 2026 (19:10 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ತೀವ್ರ ಪೈಪೋಟಿ ನಡುವೆ ದಲಿತ ಸಿಎಂ ಚರ್ಚೆ ಮುನ್ನೆಲೆಗೆ ಬರುತ್ತಿದ್ದ ಹಾಗೇ ಸಿಎಂ ಆಗಲು ನಾನು ಸಮರ್ಥರು ಎನ್ನುವ ಮೂಲಕ ಜಿ ಪರಮೇಶ್ವರ್ ಪರೋಕ್ಷವಾಗಿ ಹೇಳಿದ್ದಾರೆ.
ದಲಿತ ಸಿಎಂ ಚರ್ಚೆ ಕಾವು ಪಡೆದುಕೊಳ್ಳುತ್ತಿರುವ ಬಗ್ಗೆ ಮಾತಾಡಿದ ಪರಮೇಶ್ವರ್ ಅವರು, ಸಿಎಂ ಆಗಲು ತಾವೂ ಸಮರ್ಥರು, ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಿ ಅಂತ ಹೇಳಿದ್ದಾರೆ.
ತಮ್ಮ ಸಾಮರ್ಥ್ಯ ಬಗ್ಗೆಯೂ ಕ್ಲೈಮ್ ಮಾಡಿಕೊಂಡರು. ನಾನು ಎಷ್ಟು ಸಲ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲಿ. 8ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸಾಮರ್ಥ್ಯವಿಲ್ಲದೆ ಕೆಲಸ ಮಾಡಲು ಆಗುತ್ತಿತ್ತಾ. ಎರಡು ಸಲ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ, ಸಾಮರ್ಥ್ಯ ಇಲ್ಲದೇ ಈ ಕೆಲಸ ಆಗುತ್ತಾ, ರಾಜ್ಯದ ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ, ಸಾಮರ್ಥ್ಯ ಇಲ್ಲದೇ ಉಪಮುಖ್ಯಮಂತ್ರಿ ಮಾಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರು.
ನನ್ನ ಸಾಮರ್ಥ್ಯ ಬಗ್ಗೆ ಯಾರೂ ಪ್ರಶ್ನೆ ಮಾಡುವಂಥದ್ದು ಇಲ್ಲ. I am proved beyond doubt that I am capable ಆದರೆ ಸನ್ನಿವೇಶಗಳು ಬರಬೇಕು, ಪಕ್ಷದ ತೀರ್ಮಾನಗಳು ಆಗಬೇಕು ಅಷ್ಟೇ ಅಂತ ಪರಮೇಶ್ವರ್ ಗಟ್ಟಿಯಾಗಿಯೇ ಪ್ರತಿಪಾದಿಸಿದ್ದಾರೆ.
ಈ ಮೂಲಕ ಸಿಎಂ ಆಗಲು ನಾನು ಸಮರ್ಥನು ಎಂದು ಹೇಳಿಕೊಂಡರು.
ಸಿಎಂ ಆಗಲು ನಾನು ಸಮರ್ಥನು: ದಲಿತ ಸಿಎಂ ಮುನ್ನೆಲೆಗೆ