Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರೇ ದಲಿತರು ಸಿಎಂ ಆಗುವುದನ್ನು ತಪ್ಪಿಸಿದ್ದು: ಕುಮಾರಸ್ವಾಮಿ

CM Siddaramaiah
ರಾಯಚೂರು: ಕಾಂಗ್ರೆಸ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಅವರು ಯಾವತ್ತೋ ಸಿಎಂ ಆಗಬೇಕಿತ್ತು. ದಲಿತರು ಸಿಎಂ ಆಗುವುದನ್ನು ತಪ್ಪಿಸಿದ್ದೆ ಸಿದ್ದರಾಮಯ್ಯನವರೆಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. 

‘ಪಾಪ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಓಡಿಸಿ, ಪರಮೇಶ್ವರ ಅಧ್ಯಕ್ಷರಿದ್ದರೂ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ದಲಿತರು ಮುಖ್ಯಮಂತ್ರಿ ಆಗುವುದಿದ್ದರೆ ಯಾವುತ್ತೋ ಆಗುತ್ತಿತ್ತು. 75 ವರ್ಷ ಆದರೂ ಏಕೆ ಆಗಲಿಲ್ಲ ಎಂದು ಪ್ರಶ್ನೆ ಮಾಡಿದರು. 

ನಾನು ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿರುವ ಕಾರಣ ಗೃಹ ಸಚಿವ ಪರಮೇಶ್ವರ ಅವರು ವೈಯಕ್ತಿಕ ಕೆಲಸಕ್ಕೆ ಭೇಟಿ ಮಾಡಿದ್ದಾರೆ. ಅದನ್ನು ಬಿಟ್ಟು ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು. 


Share this Story:

Follow Webdunia kannada

ಮುಂದಿನ ಸುದ್ದಿ

MGNREGA ರದ್ದತಿಯಿಂದ 12ಕೋಟಿ ಕಾರ್ಮಿಕರು ತೊಂದರೆಗೀಡಾಗಿದ್ದಾರೆ: ಸಿದ್ದರಾಮಯ್ಯ