Select Your Language

Notifications

webdunia
webdunia
webdunia
webdunia

ಪರಪುರುಷನ ಜೊತೆ ಪಲ್ಲಂಗದಾಟ,ಗಂಡನಿಗೆ ಮಹೂರ್ತ..!

ಪರಪುರುಷನ ಜೊತೆ ಪಲ್ಲಂಗದಾಟ,ಗಂಡನಿಗೆ ಮಹೂರ್ತ..!
bangalore , ಶನಿವಾರ, 7 ಜನವರಿ 2023 (18:11 IST)
ಕಳೆದ ವರ್ಷ ಜೂನ್‌ ತಿಂಗಳಲ್ಲಿ  ಹೃದಯಾಘಾತದಿಂದ ಮೃತಪಟ್ಟಿದ್ದ ಅಂತಾ ಕುಟುಂಬಸ್ಥರು ಹಾಗೂ ಆತನ ಹೆಂಡತಿ ಸೇರಿಕೊಂಡು  ಆತನ ಅಂತ್ಯಕ್ರಿಯೆ ನಡೆಸಿದ್ದರು. ಆದರೆ 6 ತಿಂಗಳ ಹಿಂದಿನ ಸ್ಟೋರಿಗೆ ಈ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಇದಕ್ಕೆ ಕಾರಣ ಮೃತ ಆಂಜನೇಯನ ಮಕ್ಕಳು ತನ್ನ ಅಜ್ಜಿ ಬಳಿ ಹೇಳಿದ್ದ ಅದೊಂದು ಸತ್ಯ. ಯೆಸ್‌ ಮೃತ ಆಂಜನೇಯ 14 ವರ್ಷಗಳ ಹಿಂದೆ ಅನಿತಾ ಎಂಬಾಕೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ವರಿಸಿದ್ದ. ನಂದಿನಿ ಲೇಔಟ್‍ನ ಸಂಜಯ್ ಗಾಂಧಿನಗರದ ಸ್ಲಂನಲ್ಲಿ ವಾಸವಾಗಿದ್ದ. ಮದುವೆಗೆ ಸಾಕ್ಷಿಯೆಂಬತೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ರೂ. ಆದರೆ ಆಂಜನೇಯ ಕುಡಿತಕ್ಕೆ ದಾಸನಾಗಿದ್ದ. ಇದೇ ಕಾರಣಕ್ಕೆ ಹೆಂಡತಿ ಅನಿತಾ ದಾರಿ ತಪ್ಪಿಬಿಟ್ಟಿದ್ದಳು.
ಅಂಜನೇಯನ ಹೆಂಡತಿ ಅನಿತಾ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದಳು. ಆಗಾ ಪರಿಚಯವಾದವನೇ ಕ್ಯಾಟರಿಂಗ್‌ ಕೆಲಸ ಮಾಡಿಕೊಂಡಿದ್ದ ಈ ರಾಕೇಶ್‌... ನೋಡೋದಕ್ಕೆ ಅಟ್ರಾಕ್ಟಿವ್‌ ಆಗಿದ್ದ ಗಾರ್ಮೆಂಟ್ಸ್‌ ಆಂಟಿ ಕಂಡ ರಾಕೇಶ ಆಕೆಯ ಹಿಂದೆ ಬಿದ್ದಿದ್ದ. ಇತ್ತ ಗಂಡನಿಂದ ರೋಸಿ ಹೋಗಿದ್ದ ಅನಿತಾ ಸಹ ರಾಕೇಶನ ಪ್ರೇಮಪಾಶಕ್ಕೆ ಸಿಲುಕಿದ್ದಳು. ಇಬ್ಬರ ನಡುವೆ ಸರಸ,ಚಕ್ಕಂದ ಜೋರಾಗಿ ನಡೆದಿತ್ತು.. ಗಂಡ ಹೊರಗೆ ಹೋದ್ರೆ  ಸಾಕು ರಾಕೇಶ್‌, ಅನಿತಾ ರತಿ ಮನ್ಮಥರಾಗುತ್ತಿದ್ದರು.. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ವ ನೀವೇ ಹೇಳಿ.. ಇವರಿಬ್ಬರ ನಡುವಿನ ಕಣ್ಣಮುಚ್ಚಲ್ಲೆ ಆಟ ಆಂಜನೇಯನಿಗೆ ಗೊತ್ತಾಗಿತ್ತು. ಹೀಗಾಗಿ ಅನಿತಾ ಜೊತೆ ಜಗಳಕ್ಕೀಳಿದು ಅವನ ಸಹವಾಸ ಬಿಡು ಅಂತಾ ವಾರ್ನ್‌ ಕೊಟ್ಟಿದ್ದ. ಆದರೆ ಅನಿತಾ ಮಾತ್ರ ರಾಕೇಶ್‌ನ ಜೊತೆ ಕುಚ್‌ ಕುಚ್‌ ಮುಂದುವರೆಸಿದ್ದಳು. ಇದರಿಂದ ಕೋಪಗೊಂಡಿದ್ದ ಅನಿತಾ ಗಂಡ ಅಂಜನೇಯ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಬರುತ್ತಿದ್ದಾನೆ ಅಂತಾ ಪ್ರಿಯಕರ ರಾಕೇಶನ ಜೊತೆ ಸೇರಿ ಮಗಿಸೋಕೆ ಪ್ಲಾನ್‌ ಮಾಡಿದ್ದಳು.ಅವತ್ತು ಅಂಜನೇಯ ಫುಲ್‌ ಟೈಟಾಗಿ ಮನೆಯಲ್ಲಿ ಮಲಗಿದ್ದ. ಇದಕ್ಕೆ ಕಾದು ಕುಳಿತಿದ್ದ ಅನಿತಾ ಮೊದಲೇ ಪ್ಲಾನ್‌ ಮಾಡಿದಂತೆ ಪ್ರಿಯಕರ ರಾಕೇಶನನ್ನು ಮನೆಗೆ ಕರೆಸಿದ್ದಾಳೆ. ಕುಡಿದು ಬಂದು ಮಲಗಿದ್ದ ಪತಿಯ ಮುಖದ ಮೇಲೆ ದಿಂಬಿಟ್ಟು ಇಬ್ಬರು ಸೇರಿಕೊಂಡು ಉಸಿರುಗಟ್ಟಿಸಿ ಆತನ ಕಥೆ ಮುಗಿಸಿದ್ದಾರೆ. ಈ ಕೊಲೆಯನ್ನು ಅಲ್ಲೇ ಇದ್ದ ಮಕ್ಕಳು ಕಣ್ಣಾರೆ ಕಂಡಿದ್ದರು. ಆದರೆ ಅನಿತಾ ಮಾತ್ರ ಮಕ್ಕಳಿಗೆ ನಿಮ್ಮ ತಂದೆ ಸರಿಯಿಲ್ಲ, ಈ ವಿಚಾರವನ್ನು ಯಾರಿಗೂ ಹೇಳ್ಬೇಡಿ ಎಂದು ಗದರಿಸಿದ್ದಳು. ಮರುದಿನ ತನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಸಂಬಂಧಿಕರ ಮುಂದೆ ಕಥೆ ಕಟ್ಟಿದ್ದಳು. ಇದಾದ ಮೇಲೆ ಅಂಜನೇಯನ ಅಂತ್ಯಕ್ರಿಯೆ ಸಹ ಮುಗಿದಿತ್ತು.  
ಗಂಡ ಸತ್ತ ಇನ್ಮುಂದೆ ರಾಕೇಶನ ಜೊತೆ ಡಿಂಗ್‌ಡಾಂಗ್‌ ಮಾಡಿಕೊಂಡು ಇರೋಣ ಅಂತಾ ನಿರ್ಧರಿಸಿದ್ದ ಅನಿತಾ ಮಕ್ಕಳನ್ನು ಸಹ ದೂರ ಮಾಡಿದ್ದಳು. ಇಲ್ಲೇ ನೋಡಿ ರಾಕೇಶ್‌ ಹಾಗೂ ಅನಿತಾ ಗ್ರಹಚಾರ ಕೆಟ್ಟಿದ್ದು. ಅಂಜನೇಯ ತಾಯಿ ಮನೆಯಲ್ಲಿದ್ದ ಅಂಜನೇಯ ಮಕ್ಕಳು ಅಪ್ಪನನ್ನು ಅಮ್ಮ ಹಾಗೂ ಮತ್ತೊಬ್ಬ ಸೇರಿ ಕೊಲೆ ಮಾಡಿದ್ದಾರೆ ಎಂದಿದ್ದರು. ಕೂಡಲೇ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಕೊಲೆಯಾದ ಆಂಜನೇಯನ ತಾಯಿ ಮಕ್ಕಳ ಸಮೇತ ಬಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಅನಿತಾ ಹಾಗೂ ಪ್ರಿಯಕರ ರಾಕೇಶ್‍ನನ್ನು ಕರೆತಂದು ತಮ್ಮದೇ ಸ್ಟೈಲ್‌ನಲ್ಲಿ ಪ್ರಶ್ನೆ ಮಾಡಿದಾಗ ಸತ್ಯ ಕಕ್ಕಿದ್ದಾರೆ.  ಸದ್ಯ ಆರೋಪಿಗಳ ಹೆಚ್ಚಿನ ವಿಚಾರಣೆ ಸಹ ನಡೆಯುತ್ತಿದೆ. ಅದೆನೇ ಇರ್ಲಿ... ಗಂಡ ಕುಡುಕನಾಗಲಿ, ಕುರುಡನಾಗಲಿ... ಮಕ್ಕಳ ಮುಖ ನೋಡಿಕೊಂಡು ಸಂಸಾರ ಮಾಡುವುದನ್ನು ಮರೆತ ಅನಿತಾ ಇಂತಹ ಕೃತ್ಯ ಎಸಗಿ ಪ್ರಿಯಕರನ ಜೊತೆ ಜೈಲು ಸೇರಿದ್ದು ದುರಂತವೇ ಸರಿ.  
 

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವರನ್ನ ನಂಬಿ ಭೇಟಿಗೆ ಆಹ್ವಾನಿಸುವ ಮುನ್ನ ಎಚ್ಚರ..!