Publish Date: Tue, 26 Sep 2023 (13:46 IST)
Updated Date: Tue, 26 Sep 2023 (12:50 IST)
AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಓವೈಸಿ ಕರೆ ನೀಡಿದ್ದಾರೆ. ಇನ್ನು "ಅಬ್ಬಿ ಬಾರ್ ವಯನಾಡ್ ನಹಿ, ಅಬ್ಬಿ ಬಾರ್ ಹೈದರಾಬಾದ್ ಎಂದು ರಾಹುಲ್ ಗಾಂಧಿಯವರ ಕೇರಳದ ಲೋಕಸಭಾ ಕ್ಷೇತ್ರವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಓವೈಸಿ. ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುವ ಬದಲು ಚುನಾವಣಾ ಮೈದಾನಕ್ಕೆ ಬಂದು ನನ್ನ ವಿರುದ್ಧ ಸ್ಪರ್ಧಿಸಿ, ನೀವು ಸಿದ್ಧರಿದ್ದೀರಿ ಎಂದಾದರೆ ನಾನು ಸಿದ್ಧನಿದ್ದೇನೆ ಎಂದು ಅವರು ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.