Publish Date: Thu, 21 Sep 2023 (20:14 IST)
Updated Date: Thu, 21 Sep 2023 (20:17 IST)
ಸುಪ್ರೀಂ ಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇತ್ತು.. ಆದರೆ ಈ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.. ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ನಮಗೆ ಸುಪ್ರೀಂ ಕೋರ್ಟ್ನಲ್ಲಿಯೂ ನ್ಯಾಯ ಸಿಕ್ಕಿಲ್ಲ. ಪ್ರಾಧಿಕಾರದ ಆದೇಶವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.. ನಮಗೆ ಉಳಿದಿರುವುದು ಸುಪ್ರೀಂ ಕೋರ್ಟ್ ಅದೇಶವನ್ನ ಧಿಕ್ಕರಿಸುವುದೊಂದೇ ದಾರಿ.. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಒಂದು ತೀರ್ಮಾನಕ್ಕೆ ಬರಬೇಕು.. ನಾವೆಲ್ಲ ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ರು.. ಇನ್ನು ಕಾವೇರಿಗಾಗಿ ಜೈಲಿಗೆ ಹೊಗಲು ಸಿದ್ಧರಿದ್ದೇವೆ.. ಬಂಗಾರಪ್ಪನವರು ಈ ಹಿಂದೆ ಸುಗ್ರಿವಾಜ್ಞೆ ತಂದು ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಈಗ ಅದೇ ರೀತಿ ಸುಗ್ರಿವಾಜ್ಞೆ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ರು.