Select Your Language

Notifications

webdunia
webdunia
webdunia
webdunia

ವಿಶ್ವಕಪ್ ಟಿಕೆಟ್ ಗಾಗಿ ನನಗೆ ಮೆಸೇಜ್ ಮಾಡಲೇಬೇಡಿ! ಗೆಳೆಯರಿಗೆ ವಾರ್ನ್ ಮಾಡಿದ ಕೆಎಲ್ ರಾಹುಲ್

ವಿಶ್ವಕಪ್ ಟಿಕೆಟ್ ಗಾಗಿ ನನಗೆ ಮೆಸೇಜ್ ಮಾಡಲೇಬೇಡಿ! ಗೆಳೆಯರಿಗೆ ವಾರ್ನ್ ಮಾಡಿದ ಕೆಎಲ್ ರಾಹುಲ್
ಮುಂಬೈ , ಮಂಗಳವಾರ, 26 ಸೆಪ್ಟಂಬರ್ 2023 (10:12 IST)
ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಭಾರತದ ವಿವಿಧ ತಾಣಗಳಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯ ಟಿಕೆಟ್ ಗಳು ಈಗಾಗಲೇ ಆನ್ ಲೈನ್ ನಲ್ಲಿ ಸೋಲ್ಡ್ ಔಟ್ ಆಗುತ್ತಿದೆ.

ಕ್ರಿಕೆಟಿಗರಿಗೆ ಎರಡು ಟಿಕೆಟ್ ಉಚಿತವಾಗಿ ಸಿಗುತ್ತದೆ. ಈ ಟಿಕೆಟ್ ನ್ನು ಅವರು ತಮ್ಮ ಆಪ್ತರಿಗೆ ನೀಡಬಹುದು. ಹೀಗಾಗಿ ಆಯಾ ಕ್ರಿಕೆಟಿಗರು ತಮ್ಮ ತವರಿನಲ್ಲಿ ಆಡುವಾಗ ತಮ್ಮ ಗೆಳೆಯರು, ಕುಟುಂಬದವರು ಟಿಕೆಟ್ ಗಾಗಿ ಬೇಡಿಕೆಯಿಡುವುದು ಸಾಮಾನ್ಯ.

ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಈ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ತಮ್ಮ ಗೆಳೆಯರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ‘ಯಾರೂ ನನಗೆ ಟಿಕೆಟ್ ಗಾಗಿ ಮೆಸೇಜ್ ಮಾಡಬೇಡಿ. ನಾನು ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಯಾಕೆಂದರೆ ನಾನು ನನ್ನ ಬ್ಯಾಟಿಂಗ್ ಬಗ್ಗೆ ಗಮನ ಕೇಂದ್ರೀಕರಿಸಬೇಕು’ ಎಂದಿದ್ದಾರೆ.  ಈಗಾಗಲೇ ತಮ್ಮ ಆಪ್ತರಿಂದ ಟಿಕೆಟ್ ಗಾಗಿ ಸಾಕಷ್ಟು ಬೇಡಿಕೆ ಬಂದಿರುವ ವಿಚಾರವನ್ನೂ ಅವರು ಹೊರಹಾಕಿದ್ದಾರೆ. ಆದರೆ ಯಾರಿಗೂ ನಾನು ಟಿಕೆಟ್ ಅರೇಂಜ್ ಮಾಡಿಕೊಡಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ಕ್ರಿಕೆಟ್ ಗೆ ಕೊಹ್ಲಿ ನಿವೃತ್ತಿ ಬಗ್ಗೆ ಕುಚಿಕು ಗೆಳೆಯ ಎಬಿಡಿ ವಿಲಿಯರ್ಸ್ ಹೇಳಿಕೆ