Select Your Language

Notifications

webdunia
webdunia
webdunia
webdunia

ಕೈಗಾ ಅಣು ವಿದ್ಯುತ್ ಯೋಜನೆಯ 5, 6 ನೇ ಘಟಕ ನಿರ್ಮಾಣಕ್ಕೆ ವಿರೋಧ

ಕೈಗಾ ಅಣು ವಿದ್ಯುತ್ ಯೋಜನೆಯ 5, 6 ನೇ ಘಟಕ ನಿರ್ಮಾಣಕ್ಕೆ ವಿರೋಧ
ಉತ್ತರ ಕನ್ನಡ , ಶನಿವಾರ, 15 ಡಿಸೆಂಬರ್ 2018 (17:41 IST)
ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಂದು ಪಕ್ಷಾತೀತವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿರುವ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕ ಸ್ಥಾಪನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವಜನಿಕ ಅಹವಾಲು ಸಭೆ ಇಂದು ಏರ್ಪಡಿಸಿತ್ತು.  ಆದರೆ 5 ಮತ್ತು  6 ನೇ ಘಟಕಕ್ಕೆ ವಿರೋಧಿಸುತ್ತಿರುವವರಲ್ಲಿ ಅನೇಕರು  ಅಹವಾಲು ಸಭೆಗೆ ಹಾಜರಾಗದೇ ಮಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. 

ಸಾರ್ವಜನಿಕ ಸಭೆ ಕೈಗಾ ಯೋಜನಾ ಪ್ರದೇಶದಲ್ಲಿ ಮಾಡದೇ ಸಾರ್ವಜನಿಕ ಪ್ರದೇಶದಲ್ಲಿ ಮಾಡಬೇಕು ಎಂದು ಆಗ್ರಹಿಸಿದರು. ಕೆಲವು ವಿರೋಧಿ ಹೋರಾಟಗಾರರು ಅಹವಾಲು ಸಭೆಗೆ ಹಾಜರಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಸಹಕಾರಿಯಾಗುತ್ತಿಲ್ಲ ಎಂದ ಕೃಷಿ ಸಚಿವ!