Publish Date: Fri, 28 Jun 2019 (11:41 IST)
Updated Date: Fri, 28 Jun 2019 (11:43 IST)
ಬೆಂಗಳೂರು : ಮೊನ್ನೆ ಸಿಎಂ, ನಿನ್ನೆ ಮಾಜಿ ಸಿಎಂ, ಇವತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವೋಟ್ ಹಾಕಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಡಿಸಿಎಂ ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಸಾರ್ವಜನಿಕರ ಜೊತೆ ಚರ್ಚೆ ಮಾಡುತ್ತಿರುವಾಗ ಬಿಜೆಪಿಗೆ ವೋಟ್ ಹಾಕಿದ್ದೀರಾ ಎಂಬ ಮಾತನ್ನು ಹೇಳಿದ್ದಾರೆ. ಈ ಮೂಲಕ ಅವರು ಫಲಿತಾಂಶದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡದ ಅವರು, ಲೋಕಸಭೆ ಚುನಾವಣೆ ಇದ್ದಿದ್ದ ಕಾರಣ ಬರೋಕೆ ಆಗಿರಲಿಲ್ಲ. ರಸ್ತೆ ಅಗಲೀಕರಣ ಸ್ಥಳ ಪರಿಶೀಲನೆ ಮಾಡಲು ಈಗ ಬಂದಿದ್ದೇನೆ. ಇಲ್ಲಿ ಇರೋರು ಯಾರು ನಮ್ಗೆ ವೋಟ್ ಹಾಕಿದ್ದೀರೋ ಗೊತ್ತಿಲ್ಲ ಚುನಾವಣೆಯಲ್ಲಿ ಕೆಲವೊಬ್ಬರು ನಮಗೆ ವೋಟ್ ಹಾಕಿದ್ದಾರೆ. ಕೆಲವರು ಬಿಜೆಪಿಗೆ ಹಾಕಿದ್ದಾರೆ ಪರವಾಗಿಲ್ಲ ಎಂದು ಅಸಮಾಧಾನ ವ್ತಕ್ತಪಡಿಸಿದ್ದಾರೆ.