Select Your Language

Notifications

webdunia
webdunia
webdunia
webdunia

ಜೀರೋ ಟ್ರಾಫಿಕ್ ಬಳಸಿ ಕ್ಷಮೆಯಾಚಿಸಿದ ಡಿಸಿಎಂ ಪರಮೇಶ್ವರ್

ಜೀರೋ ಟ್ರಾಫಿಕ್ ಬಳಸಿ ಕ್ಷಮೆಯಾಚಿಸಿದ ಡಿಸಿಎಂ ಪರಮೇಶ್ವರ್
ಬೆಂಗಳೂರು , ಶುಕ್ರವಾರ, 28 ಜೂನ್ 2019 (10:56 IST)
ಬೆಂಗಳೂರು : ಡಿಸಿಎಂ ಪರಮೇಶ್ವರ್ ಅವರು ರಸ್ತೆ ಕಾಮಗಾರಿ ಪರಿಶೀಲನೆಗೆ  ತೆರಳುವ ವೇಳೆ ಜೀರೋ ಟ್ರಾಫಿಕ್ ಬಳಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಎನ್ನಲಾಗಿದೆ.




ಇಂದು ಡಿಸಿಎಂ ಪರಮೇಶ್ವರ್ ಅವರು ಬೆಂಗಳೂರಿನ ಆರ್.ಟಿ. ನಗರದಲ್ಲಿ ಕಾಮಗಾರಿ ವೀಕ್ಷಣೆಗೆ ತೆರಳುವ ವೇಳೆ ಜೀರೋ ಟ್ರಾಫಿಕ್ ಬಳಸಿದ್ದರು. ಡಿಸಿಎಂ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳನ್ನು ,ಖಾಸಗಿ ಶಾಲೆ ಬಸ್ ಗಳಿಗೆ ತಡೆ ನೀಡಲಾಗಿತ್ತು. 20 ನಿಮಿಷಗಳ ಕಾಲ ರಸ್ತೆಯಲ್ಲೇ ಮಕ್ಕಳು ಬಸ್ ನಲ್ಲಿ ಕುಳಿತುಕೊಳ್ಳುವಂತಾಗಿತ್ತು. ಟ್ರಾಫಿಕ್ ಜಾಮ್ ಕೂಡ ಆಗಿದೆ. ಇದರಿಂದ ಶಾಲಾ ಮಕ್ಕಳು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.


ಡಿಸಿಎಂ ಜೀರೋ ಟ್ರಾಫಿಕ್ ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ  ಹಿನ್ನಲೆಯಲ್ಲಿ ಇದೀಗ ಈ ವಿಚಾರ ಗಮನಿಸಿದ ಡಿಸಿಎಂ ಪರಮೇಶ್ವರ್ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರನ್ನು ಬ್ರಿಟಿಷರಿಗೆ ಹೋಲಿಸಿದ ಸಿದ್ದರಾಮಯ್ಯ