Publish Date: Sun, 23 Jun 2019 (13:21 IST)
Updated Date: Sun, 23 Jun 2019 (13:24 IST)
ಬಳ್ಳಾರಿ : ಡಿಸಿಎಂ ಪರಮೇಶ್ವರ್ ಅವರು ತೆರಳುತ್ತಿದ್ದ ದಾರಿಯಲ್ಲಿ ಬಿಜೆಪಿ ಬಾವುಟ ಹಾಕಿ ಮುಗುಗರಕ್ಕೀಡು ಮಾಡಿದ ಘಟನೆಗೆ ಸಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ.
ನಿನ್ನೆ ಡಿಸಿಎಂ ಪರಮೇಶ್ವರ್ ಕೊರಟಗೆರೆ ತಾಲೂಕಿ ತೋವಿನಕೆರೆಯಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಂಡಿದ್ದು, ಆದಕಾರಣ ಡಿಸಿಎಂ ಬರುವ ಮಾರ್ಗದಲ್ಲಿ ತೋವಿನಕೆರೆಯ ಅಂಗಡಿಯೊಂದರ ಮುಂದೆ ಭಾರತೀಯ ಜನಾತ ಪಕ್ಷದ ಬಾವುಟವನ್ನು ಹಾಕಲಾಗಿತ್ತು. ಈ ಬಾವುಟವನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕ ಕೆ.ಎನ್.ರವಿ ಅವರಿಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ನೀಡಿದ್ದಾರೆ. ಆತ ತನ್ನ ಅಂಗಡಿ ಮುಂದೆ ಬಾವುಟ ಹಾಕಿದರೆ ಡಿಸಿಎಂಗೆ ಏನು ಹಾನಿ ಆಗುತ್ತದೆ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಯು.ಟಿ ಖಾದರ್, ಈ ಬಗ್ಗೆ ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಅದನ್ನು ಡಿಸಿಎಂ ಮೇಲೆ ಹಾಕುವುದು ಸರಿಯಲ್ಲ. ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ ಎಂದು ಡಿಸಿಎಂ ಪರವಾಗಿ ಸಮರ್ಥನೆ ನೀಡಿದ್ದಾರೆ.