Select Your Language

Notifications

webdunia
webdunia
webdunia
webdunia

ಬೆಳಗಾವಿಯಲ್ಲಿ ಇರೋದು ಬಿಜೆಪಿ ಬಣ ಮಾತ್ರ : ಅರುಣ್ ಸಿಂಗ್

ಬೆಳಗಾವಿ
ಬೆಂಗಳೂರು : ಬೆಳಗಾವಿಯಲ್ಲಿ ಬಿಜೆಪಿ ಬಣ ಮಾತ್ರ ಇದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ಬೆಳಗಾವಿಯಲ್ಲಿ ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಎಲ್ಲಾ ನಾಯಕರು ಒಟ್ಟಾಗಿ ಇದ್ದಾರೆ.

ಬಿಜೆಪಿಯಲ್ಲಿ ಇರುವುದು ಒಂದೇ ಒಂದು ಬಣ ಅದು ಬಿಜೆಪಿ ಬಣವಾಗಿದೆ. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ಮೋದಿ, ನಡ್ಡಾ, ಯಡಿಯೂರಪ್ಪ ಸಿಎಂ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ವಿಚಾರವು ಹಳೆ ವಿಚಾರವಾಗಿದೆ. ಹೊಸದು ಏನಾದರೂ ಇದ್ದರು ಹೇಳಿ ಎಂದು ಯತ್ನಾಳ್ಗೆ ನೋಟಿಸ್ ನೀಡಿದ ಬಗ್ಗೆ ಉತ್ತರ ನೀಡಲು ನಿರಾಕರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್