ಡೆಡ್ಲಿ ಕೊರೊನಾ ವೈರಸ್ ನ ವಿಪರೀತ ಹಾವಳಿಯ ತೀವ್ರ ಪರಿಣಾಮವು ಶಾಲಾ, ಕಾಲೇಜ್ ಗಳ ಮೇಲೂ ಆಗಿದೆ.
ಈ ನಡುವೆ ಸರಕಾರ ಆನ್ ಲೈನ್ ತರಗತಿಗಳನ್ನು ನಡೆಸುವುದಕ್ಕೆ ಮುಂದಾಗಿದ್ದರೆ, ಆನ್ ಲೈನ್ ಕಲಿಕೆಗೆ ಪೂರಕವಾಗಲು ಹೈಸ್ಕೂಲ್ ಮಕ್ಕಳಿಗೆ ಸ್ಮಾರ್ಟ್ ಫೋನ್ ಗಳನ್ನು ಕೊಡಬೇಕು.
ಹೀಗಂತ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ ಸರಕಾರಕ್ಕೆ ಆಗ್ರಹ ಮಾಡಿದ್ದಾರೆ.
ಬಡಮಕ್ಕಳಿಗಾಗಿ ಸರಕಾರ ಸ್ಮಾರ್ಟ್ ಫೋನ್ ಗಳನ್ನು ವಿತರಣೆ ಮಾಡಬೇಕು. ಆ ಮೂಲಕ ಅವರ ಕಲಿಕೆಗೆ ಉತ್ತೇಜನ ಕೊಡಬೇಕು ಎಂದು ಹೇಳಿದ್ದಾರೆ.