Select Your Language

Notifications

webdunia
webdunia
webdunia
webdunia

ಆನ್ ಲೈನ್ ನಲ್ಲಿ ಡ್ರಗ್ ಸಪ್ಲೈ : ವಿದೇಶಿ ಗ್ಯಾಂಗ್ ಅರೆಸ್ಟ್

ಆನ್ ಲೈನ್ ನಲ್ಲಿ ಡ್ರಗ್ ಸಪ್ಲೈ : ವಿದೇಶಿ ಗ್ಯಾಂಗ್ ಅರೆಸ್ಟ್
bangalore , ಗುರುವಾರ, 10 ಆಗಸ್ಟ್ 2023 (15:42 IST)
ಆನ್ ಲೈನ್ ಮೂಲಕ ಡ್ರಗ್ ಡಿಲೆವರಿ‌ ಮಾಡ್ತಿದ್ದ ಗ್ಯಾಂಗ್ ನ  ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು, ಅಂತರ ರಾಜ್ಯದವರು ಹಾಗೂ ವಿದೇಶಿ ಮಹಿಳೆಯೊಬ್ಬಳು ಈ‌ ಕೇಸ್  ನಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಶೇಷಾದ್ರಿಪುರ ಪೊಲೀಸ್ರು
ಲೋಕಲ್ ಡ್ರಗ್ಸ್  ವ್ಯಸನಿಯನ್ನ ಬಂಧಿಸಿದ್ರು.  ಬಳಿಕ ಆತನಿಗೆ ಸಪ್ಲೈ ಮಾಡುವ ಓರ್ವನ್ನು ಪತ್ತೆ ಮಾಡಿದ್ದಾರೆ. ನಂತ್ರ ಆತನಿಗೆ ಸಪ್ಲೈ ಆಗಿದ್ದ ಡ್ರಗ್ ಜಲಾವನ್ನ ಪತ್ತೆಮಾಡಿದ್ದಾರೆ.
 
ಹೀಗೆ ಚೈನ್ ಲಿಂಕ್ ರೀತಿ  ಸಾಹಿಲ್, ನಾಸಿರ್, ಆದಮ್ ಖಾನ್,ಸಮೀರ್ ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಸೇರಿ ಏಳು ಜನರು ಅರೆಸ್ಟ್ ಆಗಿದ್ದಾರೆ.ಮೊದಲು  ಹಣವನ್ನು ಗೂಗಲ್ ಪೇ ಹಾಗು ಇತರ ಮಾದರಿಯಲ್ಲಿ ಪಡೆದು ಬಳಿಕ ಸ್ಥಳ ಒಂದರಲ್ಲಿ ಡ್ರಗ್ಸ್ ಇಟ್ಟು ಫೋಟೊ ಲೊಕೇಶನ್ ಕಳಿಸುತಿದ್ರು. ಹೀಗೆ ಒಬ್ಬರಿಗೆ ಒಬ್ಬರು ಬೇಟಿಯಾಗದೇ ಡ್ರಗ್ಸ್ ವ್ಯವಹಾರ ನಡೆಸುತಿದ್ದ ಅರೋಪಿಗಳು ದೆಹಲಿ ಯಿಂದ ಡ್ರಗ್ಸ್ ಪಡೆಯುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ‌. ಹೀಗಾಗಿ ದೆಹಲಿ ಯಿಂದ ಯಾರು ಸಪ್ಲೆ ಮಾಡ್ತಿದ್ರು ಅವರನ್ನು ಪೊಲೀಸ್ರು ಹುಡುಕಾಟ  ನಡೆಸುತ್ತಿದ್ದು,ಅರೋಪಿಗಳ ಬಳಿಯಿಂದ ಮುನ್ನೂರು ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಅಲ್ದೆ ಮೊದಲಿಗೆ ಹಣ ಪಡೆದು ಆಮೇಲೆ ಡ್ರಗ್ಸ್ ಸಪ್ಲೈ ಮಾಡ್ತಾರೆ   ಇನ್ನೂ ಸಪ್ಲೈ ಮಾಡೋರು ನೇರವಾಗಿ ಕಂಟೆಕ್ಟ್ ಮಾಡೋದಿಲ್ಲ. ಏನಿದ್ದರೂ ಆನ್ ಲೈನ್ ಮೂಲಕನೇ ವ್ಯವಹಾರ ಇನ್ನೂ ಹಲವು ಆರೋಪಿಗಳ ಬೇಟಿಗೆ ಪೊಲೀಸರು ತಲಾಷ್ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ...!