Publish Date: Tue, 08 Aug 2023 (19:30 IST)
Updated Date: Tue, 08 Aug 2023 (19:34 IST)
ಅವರಿಬ್ಬರು ಮಂಗಳೂರು ಮೂಲದ ದಂಪತಿ. ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ರು. ಆದರೆ ಪತ್ನಿ ವಿಚಾರದಲ್ಲಿ ಹಿಂದೆ ಆದ ಒಂದು ಘಟನೆಯನ್ನ ಆತ ಮರೆಯಲಾಗುತ್ತಿರ್ಲಿಲ್ಲ.. ಕೊನೆಗೆ ಆ ನೋವೋ ಏನೋ ಪತಿರಾಯ ಹಂತಕನಾಗಿ ಸೆರೆಂಡರ್ ಆಗಿದ್ದಾನೆ. ಬೆಂಗಳೂರಿನಲ್ಲಿ ಮತ್ತೊಂದು ಹೆಣ ಉರುಳಿದೆ. 11 ವರ್ಷದ ಸಂಸಾರಕ್ಕೆ ಬೆಂಕಿ ಬಿದ್ದಿದ್ದು, ಪತ್ನಿಯನ್ನು ಕೊಂದ ಗಂಡ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಜೀವನ ಸಾಗಿಸಲು ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ವೈಟ್ಫೀಲ್ಡ್ ಭಾಗದಲ್ಲಿ ನೆಲೆಸಿ ಪಾನಿಪುರಿ ಅಂಗಡಿ ನಡೆಸುತ್ತಿದ್ರು. ಆದರೆ ಇವರ ಸಂಸಾರಕ್ಕೀಗ ಬೆಂಕಿ ಬಿದ್ದಿದೆ. ಹಳೆ ಘಟನೆಯನ್ನು ಮನಸಿಲ್ಲಿಟ್ಟುಕೊಂಡಿದ್ದ ಪತಿ ತಾರಾನಾಥ್ 35 ವರ್ಷದ ತನ್ನ ಪತ್ನಿ ಸರಿತಾಳನ್ನ ಹಗ್ಗದಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮುಂದಾಗಿದ್ದ, ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೇ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ
ಅಷ್ಟಕ್ಕೂ ಈ ಹತ್ಯೆಗೆ ಕಾರಣ ಹಳೇ ನೋವಂತೆ. ಆರೋಪಿ ತಾರಾನಾಥ್ ಪತ್ನಿ ಸರಿತಾ ಮೇಲೆ ಈ ಹಿಂದೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಆ ವೇಳೆ ಪತ್ನಿಯನ್ನು ಜನ ಕಳ್ಳಿ ಕಳ್ಳಿ ಅನ್ನೋದನ್ನ ಸಹಿಸದೇ ಇಬ್ಬರು ಬೆಂಗಳೂರಿಗೆ ಬಂದಿದ್ರು. ಆದ್ರೆ ಪತ್ನಿ ಕಳ್ಳಿಯಾದ ನೋವು & ಆಕೆ ಸರಿಯಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರೋದಾಗಿ ತಾರಾನಾಥ್ ಪೊಲೀಸರ ಮುಂದೆ ಹೇಳ್ತಿದ್ದಾನಂತೆ. ಆರೋಪಿ ತಾರಾನಾಥ್ ಪತ್ನಿಯ ಕೊಲೆಗೆ ಎರಡೆರಡು ಕಾರಣ ಕೊಡ್ತಿದ್ದಾನೆ. ಸದ್ಯ ವೈಟ್ ಫೀಲ್ಡ್ ಪೊಲೀಸರಿಂದ ಆರೋಪಿಯ ವಿಚಾರಣೆ ಮಾಡ್ತಿದ್ದು, ಕೊಲೆಗೆ ಅಸಲಿ ಕಾರಣ ಯಾವುದು, ಯಾವುದು ಸುಳ್ಳು ಎಂಬುದು ತನಿಖೆಯಿಂದ ಹೊರಬರಬೇಕಿದೆ.