ಸುರತ್ಕಲ್‌ನ ವಿದ್ಯಾದಾಯಿನೀ ಶಾಲಾ ಮುಂಭಾಗದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್‌ನ ಶಾಖಾ ಕಚೇರಿ ಪಕ್ಕದ ಇದೇ ಬ್ಯಾಂಕಿನ ATM ಕೇಂದ್ರದಲ್ಲಿ JCB ಬಳಸಿ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕಳ್ಳತನ ಯತ್ನದ ವೇಳೆ ಸಕಾಲದಲ್ಲಿ ಬ್ಯಾಂಕ್ ಸೈರನ್ ಮೊಳಗಿದ್ದರಿಂದ ಜೆಸಿಬಿ ಸಹಿತ ಕಳ್ಳರು ಪರಾರಿಯಾಗಿದ್ದರೂ,
 
 			
 
 			
			                     
							
							
			        							
								
																	
	ಸಿಕ್ಕಿ ಬೀಳುವ ಭೀತಿಯಿಂದ ಜೋಕಟ್ಟೆ ಬಳಿ ಕೃತ್ಯಕ್ಕೆ ಬಳಸಿದ ಜೆಸಿಬಿಯನ್ನು ಬಿಟ್ಟು ಹೋಗಿದ್ದಾರೆ. ಕಳೆದ ಎರಡು ದಿನದ ಹಿಂದೆ ಪಡುಬಿದ್ರಿಯಲ್ಲಿ JCB ಕಳವು ಮಾಡಿದ ಜೆಸಿಬಿ ಇದೆಂದು ತಿಳಿದು ಬಂದಿದೆ. ಸುರತ್ಕಲ್‌ನ ವಿದ್ಯಾದಾಯಿನಿ ಹೆದ್ದಾರಿ ಒಂದು ಬದಿ ವಾಣಿಜ್ಯ ಕಟ್ಟಡಗಳು ಮಾತ್ರ ಇದ್ದು ಇನ್ನೊಂದು ಬದಿ ಶಾಲಾ ವಠಾರವಿದೆ. ಇಲ್ಲಿನ ಹೆದ್ದಾರಿಯ ಅಂಡರ್ ಪಾಸ್ ಮೇಲ್ಬಾವಣಿ ಅಡ್ಡವಿರುವುದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತಕ್ಷಣಕ್ಕೆ ದಾರಿ ಹೋಕರಿಗೆ ಕಾಣದ ಕಾರಣದಿಂದ ಇದೇ ಸ್ಥಳದಲ್ಲಿನ ATM ದೋಚಲು ಕಳ್ಳಲು ಕೈ ಚಳಕ ತೋರಿಸಲು ಯತ್ನಿಸಿದ್ದಾರೆ. JCBಯಿಂದ ಗೋಡೆ ಒಡೆದು ಹಾಕಿದ ಪರಿಣಾಮ ತಡೆಗೋಡೆ ಕೆಳಗೆ ಉರುಳಿ ಬಿದ್ದರೆ, ಕಟ್ಟಡದ ಶೆಟರ್‌ನ ಕೀಲು ಒಂದೇ ಏಟಿಗೆ ಹೊರಗೆ ಬಂದಿದೆ. ಮುಂಭಾಗದಲ್ಲಿ ಅಳವಡಿಸಿದ್ದ ಗಾಜನ್ನು ಒಡೆದು ಹಾಕಿದ ಬಳಿಕ ಒಳಗಿದ್ದ ATM ಯಂತ್ರವನ್ನು ಒಡೆದು ಸಾಗಿಸಲು ಮುಂದಾದಾಗ ಸೈರನ್ ಮೊಳಗುತ್ತಿದ್ದರಿಂದ ಜನರು ಹಾಗೂ ಪೊಲೀಸರು ಬರುವ ಭೀತಿಯಿಂದ ಅರ್ಧದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.