Select Your Language

Notifications

webdunia
webdunia
webdunia
webdunia

ಮಿಸ್ ಆಗಿ‌ ಬೇರೆ ಕಾರು‌ ಹತ್ತಿ, ಅವಾಂತರ ಮಾಡಿದ್ದ ಮಹಿಳೆ

crio news
bangalore , ಗುರುವಾರ, 10 ಆಗಸ್ಟ್ 2023 (13:38 IST)
ಸಿಟಿಯಲ್ಲಿ  ಉಬರ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ ಮಾಡಿರೋ ಘಟನೆ ನಗರದ ಬೋಗನಹಳ್ಳಿಯಲ್ಲಿ ನಡೆದಿದೆ. ಮಗನನ್ನ ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ರು. ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮಹಿಳೆಗೆ ಬುಕ್ ಆಗಿದ ಕ್ಯಾಬ್ ಬಿಟ್ಟು ಬೇರೆಂದೋ  ಕ್ಯಾಬ್ ಬಂದಿದೆ. ಈ ವೇಳೆ ತನಗೆ ಬುಕ್ ಆಗಿದ ಕ್ಯಾಬ್ ಎಂದು ಮಹಿಳೆ ಬೇರೆ ಕ್ಯಾಬ್  ಹತ್ತಿ ಕುಳಿತಿದ್ರು.ಬಳಿಕ ಕ್ಯಾಬ್ ನಂಬರ್ ನೋಡಿ ಬೇರೆ ಕ್ಯಾಬ್ ಎಂದು ಅರಿತು ಕ್ಯಾಬ್ ಇಳಿಯಲು ಯತ್ನಿಸಿದ್ದಾರೆ.ಈ ವೇಳೆ ಕಾರು ಚಲಾಯಿಸಲು  ಚಾಲಕ ಮುಂದಾಗಿದ್ದಾನೆ.ಬಳಿಕ ದಿಢೀರನೆ ಕ್ಯಾಬ್ ನಿಲ್ಲಿಸಿ ಏಕಾಏಕಿ ಮಹಿಳೆ ತಲೆಗೆ ಹೊಡೆಯಲು ಚಾಲಕ ಮುಂದಾಗಿದ್ದಾನೆ.
 
ಅಪಾರ್ಟ್‌ಮೆಂಟ್ ಮುಂಭಾಗದಲ್ಲೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು,ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನ  ಸ್ಥಳೀಯರು ರಕ್ಷಿಸಿದ್ದಾರೆ.ಘಟನೆಯ ದೃಶ್ಯ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು,ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
 
ಇನ್ನೂ ಈ ಬಗ್ಗೆ ಮಾತನಾಡಿರೋ ಚಾಲಕ ಬಸವರಾಜ್  ಮಿಸ್ ಆಗಿ ನನ್ನ ಕಾರಿಗೆ ಹತ್ತಿದ್ದಾರೆ ಸ್ವಲ್ಪ ದೂರ‌ ಹೋದ ನಂತರ ಏಕಾಏಕಿ ಬೈದು ಕಾರು ನಿಲ್ಲಿಸುವಂತೆ ನಿಂದಿಸಿ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ್ದಾರೆ ಅಲ್ಲದೆ ಕಾರಿನಿಂದ ಇಳಿದ ಮೇಲೆ ಕಾರಿನ ಡೋರನ್ನ‌ ಜೋರಾಗಿ ಹಾಕಿದ್ರು ಕೇಳಿದ್ರೆ ನನ್ನನೆ ಬೈದು ನನ್ನ ವಿರುದ್ಧ ವೇ ದೂರು ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ತನಿಖೆಯಿಂದ ಸತ್ಯ‌ಹೊರಬರಬೇಕು.
 

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್