Select Your Language

Notifications

webdunia
webdunia
webdunia
webdunia

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
bangalore , ಗುರುವಾರ, 10 ಆಗಸ್ಟ್ 2023 (13:08 IST)
ಪಿಯು ಪೂರಕ ಪರೀಕ್ಷೆ- 2ರ ನೋಂದಣಿ ದಿನಾಂಕ ವಿಸ್ತರಣೆ ಮಾಡಲಾಗಿದೆ.ನೋಂದಣಿ ಮಾಡಲು ಆಗಸ್ಟ್ 10 ಕೊನೆ ದಿನಾಂಕವಾಗಿತ್ತು.ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡುತ್ತಿರುವ ಹಿನ್ನೆಲೆ ನೋಂದಣಿ ದಿನಾಂಕ ವಿಸ್ತರಣೆ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಮಾಪನ ನಿರ್ಣಯ ಮಂಡಳಿ ಮಾಡಿದೆ.
 
ಪರೀಕ್ಷಾ ಶುಲ್ಕ ಪಾವತಿಸಲು ನಿಗದಿಪಡಿಸಿರುವ ದಿನಾಂಕಗಳು ಈ ಕೆಳಗಿನಂತಿವೆ
 
12-08-2023. - ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ  ಪಾವತಿಸಲು ಹಾಗೂ ಪ್ರಾಂಶುಪಾಲರು ಪಿಯು ಎಕ್ಸಾಮ್ ಲಾಗಿನ್ ನಲ್ಲಿ ಮಾಹಿತಿಯನ್ನು ನಿಗದಿಪಡಿಸಲು ಕೊನೆ ದಿನಾಂಕ
 
14-08-2023- ಪ್ರಾಂಶುಪಾಲರು ಪರಿಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಸಂದಾಯ ಮಾಡಲು ಕೊನೆ ದಿನಾಂಕ
 
16-೦8-2೦23- ಪ್ರಾಂಶುಪಾಲರು ಪರೀಕ್ಷೆ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಲು ಕೊನೆ ದಿನಾಂಕ
 
17-08-2023- ಜಿಲ್ಲಾ ಉಪನಿರ್ದೇಶಕರುಗಳು ಅರ್ಜಿಗಳನ್ನು ಮಂಡಲಿಗೆ ಸಲ್ಲಿಸಲು ಕೊನೆ ದಿನಾಂಕ
 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ವಿರುದ್ಧ 15% ಕಮಿಷನ್ ಆರೋಪ ಸುಳ್ಳು : ರಾಮಲಿಂಗಾ ರೆಡ್ಡಿ