Select Your Language

Notifications

webdunia
webdunia
webdunia
webdunia

ಈರುಳ್ಳಿ ತುಂಬಾ ದುಬಾರಿಯಾಗುತ್ತಾ..?

ಈರುಳ್ಳಿ
ಸದ್ಯ ದೇಶದಲ್ಲಿ ಈರುಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಇಲ್ಲದಿರುವ ಹಿನ್ನೆಲೆಯಲ್ಲಿ ಈರುಳ್ಳಿಗೆ ಮುಂದಿನ ದಿನಗಳಲ್ಲಿ ಕೊರತೆಯಾಗದೆ ಇರಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಬೆಲೆ ಸಿಗದಂತಾಗಲಿದೆ.
ಹೀಗಾಗಿ ಈರುಳ್ಳಿ ಬೆಲೆ ಅನಿರೀಕ್ಷಿತವಾಗಿ ಏರಿಕೆಯಾಗದಂತೆ ಸರ್ಕಾರ ಸಂಪೂರ್ಣ ಯೋಜನೆ ಸಿದ್ಧಪಡಿಸಿದೆ. ಕಡಿಮೆ ಬೆಲೆಯ ಈರುಳ್ಳಿಯ ಲಾಭವನ್ನು ಪಡೆದುಕೊಂಡು ಈಗಾಗಲೇ ಈರುಳ್ಳಿಯನ್ನು ಸರಿಯಾಗಿ ಖರೀದಿಸಿ ಸಂಗ್ರಹಿಸಲಾಗಿದೆ. 2022-23ರಲ್ಲಿ ಬಫರ್ ಸ್ಟಾಕ್ ನಿರ್ಮಿಸಲು ಸರ್ಕಾರವು ರೈತರಿಂದ 2.5 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ. ಈರುಳ್ಳಿ ಬೆಲೆ ಏರಿಕೆಯಾದರೆ ಈ ಸಂಗ್ರಹವಾಗಿರುವ ಈರುಳ್ಳಿಯನ್ನು ಪೂರೈಸಲು ಸಿದ್ಧವಾಗಿದೆ. ಕೃಷಿ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ಕಳೆದ ವರ್ಷ 26.64 ಮಿಲಿಯನ್ ಈರುಳ್ಳಿ ಉತ್ಪಾದನೆಯಾಗಿದೆ. ಈ ವರ್ಷ 37.17 ಮಿಲಿಯನ್ ಟನ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈರುಳ್ಳಿ ಬೆಲೆ ಹೆಚ್ಚಾಗುವ ರಾಜ್ಯಗಳ ಆಧಾರದ ಮೇಲೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶೇಖರಿಸಿದ ಈರುಳ್ಳಿಯನ್ನು ಮಾರುಕಟ್ಟೆಗೆ ತರಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮೋತ್ಸವ ಅಬ್ಬರ ಕಟ್ಟಿಹಾಕಲು ಬಿಜೆಪಿ ಪ್ಲ್ಯಾನ್​